ಅಂಗಾಂಗ ದಾನದಲ್ಲಿ ಎರಡನೇ ಸ್ಥಾನಕ್ಕೇರಿದ ಕರ್ನಾಟಕ…
ಭಾರತದಲ್ಲೇ ಅಂಗಾಂಗ ದಾನ ಮಾಡುವವರ ಪಟ್ಟಿಯಲ್ಲಿ ಕರ್ನಾಟಕ 2 ನೇ ಸ್ಥಾನಕ್ಕೇರಿದೆ. ಅಂಗಾಂಗ ದಾನ ಮಾಡುವ ಪಟ್ಟಿಯಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದೆ.
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ನಿಧನ ನಂತರ ಅಂಗಾಗ ದಾನ ಮಾಡಿದ್ದರ ಫಲವಾಗಿ ಸ್ಪೂರ್ತಿಗೊಂಡ ಜನರುವ ಅಂಗಾಗ ದಾನ ಮಾಡಲು ಮುಂದೆ ಬಂದಿದ್ದಾರೆ. 2022ರಲ್ಲಿ 151 ಮಂದಿ ಅಂಗಾಂಗ ದಾನ ಮಾಡುವ ಮೂಲಕ ಕರ್ನಾಟಕವನ್ನ 2 ನೇ ಸ್ಥಾನಕ್ಕೆ ತಂದಿದ್ದಾರೆ.
ಕರ್ನಾಟಕದಲ್ಲಿ ಅಂಗಾಂಗ ಕಸಿ ಮಾಡಲು 2007 ರಲ್ಲಿ ಸಮನ್ವಯ ಸಮಿತಿ ಪ್ರಾರಂಭವಾದ ನಂತರದಿಂದ 105 ಕ್ಕಿಂತ ಹೆಚ್ಚು ಅಂಗಾಂಗ ದಾನಗಳನ್ನ ಮಾಡಲಾಗಿದೆ. 2019 ರಲ್ಲಿ 105 ಅಂಗಾಗ ದಾನ ಮಾಡಲಾಗಿತ್ತು. ತೆಲಂಗಾಣದಲ್ಲಿ 194 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಗುಜರಾತ್ ಮೂರನೇ ಸ್ಥಾನದಲ್ಲಿದೆ.
ಕರ್ನಾಟಕ SOTTO ಅಧಿಕಾರಿಗಳ ಪ್ರಕಾರ, 2022 ರಲ್ಲಿ ಶವ ಅಂಗಾಂಗ ಕಸಿ ಕಾರ್ಯಕ್ರಮಕ್ಕೆ ಅಗ್ರ ಕೊಡುಗೆ ನೀಡಿದವರಲ್ಲಿ ಆಸ್ಟರ್ ಆರ್‌ವಿ ಆಸ್ಪತ್ರೆ (20 ದೇಣಿಗೆ), ಅಪೊಲೊ ಬಿಜಿಎಸ್ ಮೈಸೂರು (19), ವಿಕ್ಟೋರಿಯಾ ಆಸ್ಪತ್ರೆ ಕ್ಯಾಂಪಸ್‌ನಲ್ಲಿರುವ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್ (ಟಿಇಸಿಸಿ) (12), ಆಸ್ಟರ್. ಸಿಎಂಐ (12), ಮತ್ತು ಕೆಂಗೇರಿಯಲ್ಲಿ ಬಿಜಿಎಸ್ ಗ್ಲೋಬಲ್ (12) ಗಳು ಸೇರಿವೆ.
organ donations: Karnataka ranked second in organ donation…