Oscar 2022: – ಅತ್ಯುತ್ತಮ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆದ “ವಿಲ್ ಸ್ಮಿತ್”
ಟೆನಿಸ್ ಆಟದ ಕುರಿತು ನಿರ್ಮಿಸಲಾದ ಬಯೋಪಿಕ್ ಸಿನಿಮಾ “ಕಿಂಗ್ ರಿಚರ್ಡ್” ಗಾಗಿ ಹಾಲಿವುಡ್ ನಟ ವಿಲ್ ಸ್ಮಿತ್ ತಮ್ಮ ಅತ್ಯುತ್ತಮ ನಟನೆಗಾಗಿ ಆಸ್ಕರ್ ಪ್ರಶಸ್ತಿಯನ್ನ ಗೆದ್ದಿದ್ದಾರೆ. ಖ್ಯಾತ ಟೆನ್ನಿಸ್ ತಾರೆಯರಾದ ವೀನಸ್ ಮತ್ತು ಸೆರೆನಾ ವಿಲಿಯಮ್ಸ್ ಅವರ ತಂದೆ ರಿಚರ್ಡ್ ಪಾತ್ರದಲ್ಲಿ ವಿಲ್ ಸ್ಮಿತ್ ಅಭಿನಯಿಸಿದ್ದಾರೆ.
ಭಾನುವಾರ ಗಾಲದಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ, ಇದಕ್ಕೂ ಮೊದಲು ಆಸ್ಕರ್ ನಿರೂಪಕ ಕ್ರಿಸ್ ರಾಕ್ ಕಪಾಳ ಮೋಕ್ಷ ಮಾಡಿ ವಿಲ್ ಸ್ಮಿತ್ ವಿವಾದ ಹುಟ್ಟುಹಾಕಿದ್ದರು. ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಬಗ್ಗೆ ಹಾಸ್ಯ ಮಾಡಿದ್ದಕ್ಕಾಗಿ ನಿರೂಪಕ ರಾಕ್ ವೇದಿಕೆ ಮೇಲೆಲೇ ಕಪಾಳಕ್ಕೆ ಹೊಡೆಯುವ ಮೂಲಕ ಸಮಾರಂಭದಲ್ಲಿ ದೊಡ್ದ ವಿವಾದವನನ್ನೆ ಸ್ಮಿತ್ ಹುಟ್ಟು ಹಾಕಿದರು. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಆಸ್ಕರ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡರು.
ಆಸ್ಕರ್ ಪ್ರಶಸ್ತಿಯನ್ನ ಪಡೆದ ನಂತರ ಮಾತನಾಡಿ ವಿಲ್ ಸ್ಮಿತ್ – ರಿಚರ್ಡ್ ವಿಲಿಯಮ್ಸ್ ಅವರು ತಮ್ಮ ಕುಟುಂಬವನ್ನ ಕಷ್ಟಪಟ್ಟು ರಕ್ಷಿಸಿದರು ಎಂದು ಕಣ್ಣೀರಿಡುತ್ತಾ ಹೇಳಿದರು. “ಅಕಾಡೆಮಿ ನನ್ನನ್ನು ಮರಳಿ ಆಹ್ವಾನಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಸ್ಮಿತ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ವಿಲ್ ಸ್ಮಿತ್ ಪ್ರಶಸ್ತಿ ರೇಸ್ ನಲ್ಲಿದ್ದ ಜೇವಿಯರ್ ಬಾರ್ಡೆಮ್ (“ಬೀಯಿಂಗ್ ದಿ ರಿಕಾರ್ಡೋಸ್”), ಬೆನೆಡಿಕ್ಟ್ ಕಂಬರ್‌ಬ್ಯಾಚ್ (“ದ ಪವರ್ ಆಫ್ ದಿ ಡಾಗ್”), ಆಂಡ್ರ್ಯೂ ಗಾರ್ಫೀಲ್ಡ್ (“ಟಿಕ್, ಟಿಕ್…ಬೂಮ್!”) ಮತ್ತು ಡೆನ್ಜೆಲ್ ವಾಷಿಂಗ್ಟನ್ (“ದಿ ಟ್ರ್ಯಾಜೆಡಿ ಆಫ್ ಮ್ಯಾಕ್‌ಬೆತ್”) ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
Oscar 2022: – Will Smith wins best actor Oscar for ‘King Richard’