Oscars Award : ಆಸ್ಕರ್ ಪ್ರಶಸ್ತಿ ಕಳೆದುಕೊಂಡಿದ್ದರಂತೆ ಎ ಆರ್ ರೆಹಮಾನ್ , ಮತ್ತೆ ಸಿಕ್ಕಿದ್ದು ಹೇಗೆ..??
ಮಾರ್ಚ್ 13ರಂದು ನಡೆದ 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದಿವೆ.
ರಾಜಮೌಳಿ ನಿರ್ದೇಶನ , ರಾಮ್ ಚರಣ್ , ಜ್ಯೂನಿಯರ್ NTR ನಟನೆ , MM ಕೀರವಾಣಿ ಅವರು ಸಂಗೀತ ನೀಡಿರುವ RRR ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ RRR ಇತಿಹಾಸ ನಿರ್ಮಿಸಿದೆ..
ಭಾರತೀಯ ಸಿನಿಮಾ ಇಂಡಸ್ಟ್ರಿ ಅಂದ್ರೆ ಬಾಲಿವುಡ್ ಎಂದು ಮೆರೆಯುತ್ತಿದ್ದ ಕಾಲವೊಂದಿತ್ತು. ಆದ್ರೀಗ ಕಾಲ ಬದಲಾಗಿದೆ.. ಸೌತ್ ಸಿನಿಮಾಗಳದ್ದೇ ದರ್ಬಾರ್ ಆಗಿದೆ. ಸೌತ್ ಸಿನಿಮಾಗಳ ಮುಂದೆ ಬಾಲಿವುಡ್ ಡಮ್ಮಿ ಆಗಿದೆ.
ಈಗ ಬಾಲಿವುಡ್ ಕೂಡ ಹುಬ್ಬೇರಿಸುವಂತೆ, ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಗೆದ್ದು ಭಾರತಕ್ಕೆ ಹೆಮ್ಮೆ ತಂದಿರುವ RRR ತಂಡಕ್ಕೆ ವಿಶ್ವಾದ್ಯಂತ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.
ದಿ ಎಲಿಫೆಂಟ್ ವಿಸ್ಪರರ್ಸ್ ‘ ಡಾಕ್ಯುಮೆಂಟರಿಗೆ ಕೂಡ ಆಸ್ಕರ್ ಪ್ರಶಸ್ತಿ ಸಿಕ್ಕಿದೆ.
ಅಂದ್ಹಾಗೆ ಭಾರತದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿರುವವರು ಕಡಿಮೆಯೇ..
2008ರಲ್ಲಿ ರಿಲೀಸ್ ಆಗಿ ಸಿನಿಮಾರಂಗದಲ್ಲಿ ಒಂದು ಹೊಸ ಅಲೆಯನ್ನೇ ಎಬ್ಬಿಸಿದ್ದ ‘ಸ್ಲಮ್ಡಾಗ್ ಮಿಲಿಯನೇರ್’ ಚಿತ್ರಕ್ಕಾಗಿ A.R ರೆಹಮಾನ್ ಅವರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು.
ಆದ್ರೆ ಸ್ಲಮ್ ಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ಎರಡು ಆಸ್ಕರ್ ಗೆದ್ದಿದ್ದ ರೆಹಮಾನ್ ಅವರು
ಅದನ್ನು ಕಳೆದುಕೊಂಡಿದ್ದಾರಂತೆ.
ತಮಗೆ ಸಿಕ್ಕ ಪ್ರಶಸ್ತಿಯನ್ನ ರೆಹಮಾನ್ ಅವರು ತಾಯಿ ಕರೀಮಾ ಬೇಗಮ್ ಗೆ ನೀಡಿದ್ದರು. ಅವರು ಆಸ್ಕರ್ ಟ್ರೋಫಿಯನ್ನು ಕಬೋರ್ಡ್ನಲ್ಲಿ ಬಟ್ಟೆಮುಚ್ಚಿ ಜೋಪಾನವಾಗಿರಿಸಿದ್ದರು.
2020ರ ಡಿಸೆಂಬರ್ ನಲ್ಲಿ ರೆಹಮಾನ್ ತಾಯಿ ಕರೀಮಾ ಬೇಗಮ್ ನಿಧನ ಹೊಂದಿದರು. ಈ ವೇಳೆ ತಾಯಿ ಆಸ್ಕರ್ ಟ್ರೋಫಿಯನ್ನು ಎಲ್ಲಿಟ್ಟಿದ್ದಾರೆ ಎನ್ನುವ ಗೊಂದಲ ರೆಹಮಾನ್ ಗೆ ಕಾಡಿತ್ತು.
ಇದಕ್ಕಾಗಿ ಅವರು ಸಾಕಷ್ಟು ಹುಡುಕಾಡಿದ್ದರು. ಆದರೆ, ಈ ಪ್ರಶಸ್ತಿ ಸಿಗಲೇ ಇಲ್ಲ. ಕೆಲ ಸಮಯದ ನಂತರ ಅದು ಮತ್ತೊಂದು ಕಬೋರ್ಡ್ನಲ್ಲಿ ಸಿಕ್ಕಿತ್ತು. ಈ ವಿಚಾರವನ್ನು ರೆಹಮಾನ್ ಸಂದರ್ಶನದಲ್ಲಿ ಈ ಮೊದಲು ಹೇಳಿಕೊಂಡಿದ್ದರು.
ಭಾರತಕ್ಕೆ ಈ ವರ್ಷ 2 ಆಸ್ಕರ್ ಪ್ರಶಸ್ತಿ ಒಲಿದು ಬಂದ ಬೆನ್ನಲ್ಲೇ ಹಳೆಯ ಘಟನೆಯನ್ನ ನೆನಪುಮಾಡಿಕೊಳ್ಳಲಾಗ್ತಿದೆ..
ಇನ್ನೂ ಆಸ್ಕರ್ ಗೆದ್ದ ಎಂ.ಎಂ ಕೀರವಾಣಿ ಹಾಗೂ ಕಾರ್ತಿಕಿ ಗೊನ್ಸಾಲ್ವೆಸ್ ಅವರಿಗೆ ರೆಹಮಾನ್ ಅವರು ಟ್ವಿಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ.
Oscars Award : AR Rahman lost the Oscar award, how did he get it again..??