NETFLIX , AMAZON ಸೇರಿ ಹಲವು ಒಟಿಟಿಗಳ ಮೇಲಿನ ಬಾಕಿ ಕೇಸ್ ಗಳಿಗೆ ತಡೆ ನೀಡಿದ ಸುಪ್ರೀಂ..!
ಇತ್ತೀಚಿನ ದಿನಗಳಲ್ಲಿ ಥಿಯೇಟರ್ ಗಳ ಮುಂದೆ ಒಟಿಟಿಗಳೇ ಟ್ರೆಂಡ್ ಆಗ್ತಿದ್ದು, ಥಿಯೇಟರ್ ಗಳಿಗೆ ಹೋಗಿ ಸಿನಿಮಾ ನೋಡೋಕಿಂತ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಜನರು ಸಿನಿಮಾ ನೋಡೋದು ಹೆಚ್ಚಾಗಿದೆ. ವೆಬ್ ಸೀರೀಸ್, ಡ್ರಾಮಾಗಳು, ಶೋಗಳು, ಸಿನಿಮಾಗಳು ಎಲ್ಲವೂ ಒಟಿಟಿಗಳಲ್ಲಿ ಲಭ್ಯವಿದೆ.
ಆದ್ರೆ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಕೆಲವೊಮ್ಮೆ ಅಶ್ಲೀಲತೆ ಪ್ರದರ್ಶಿಸಿರುವುದಾಗಿಯೂ ಆರೋಪಗಳು ಕೇಳಿ ಬಂದಿವೆ. ಒಟಿಟಿಗಳ ಮೇಲೆ ಹಲವಾರು ಕೇಸ್ ಗಳು ನಾನಾ ಕಾರಣಗಳಿಗೆ ದಾಖಲಾಗಿವೆ.
ಆದ್ರೆ ಇದೀಗ ಈ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ, ಹಾಟ್‌ಸ್ಟಾರ್, ಸೋನಿ ಲೈವ್ ಹೀಗೆ ಹಲವು ಒಟಿಟಿ ಪ್ಲಾಟ್ ಫಾರ್ಮ್ ಗಳ ವಿರುದ್ಧ ಹೂಡಿರುವ ಅರ್ಜಿಗಳ ವಿಚಾರಣೆಯನ್ನ ನಡೆಸಿರುವ ಸುಪ್ರೀಂ ಕೋರ್ಟ್ ಒಟಿಟಿಗಳ ಮೇಲೆ ದೇಶದಾದ್ಯಂತ ಬಾಕಿ ಇರುವ ಪ್ರಕರಣಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. NGO ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಮುಖ್ಯವಾಗಿ ತಾಂಡವ್ , ಸೇಕ್ರೆಡ್ ಗೇಮ್ಸ್, ಮಿರ್ಜಾಪುರ್, ಎಕೆ v/s ಎಕೆ, ಸೇರಿದಂತೆ ಇನ್ನೂ ಹಲವಾರು ಸರಣಿಗಳ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ , ಅಶ್ಲೀಲತೆ ಸೇರಿ ಇನ್ನೂ ಹಲವು ವಿವಾದಾತ್ಮಕಗಳನ್ನ ಸೃಷ್ಟಿ ಮಾಡಿರೋದಾಗಿ ಆರೋಪಗಳು ಕೇಳಿಬಂದಿದ್ದವು. ಪ್ರಮುಖವಾಗಿ ವಿದೇಶಿ ವೆಬ್ ಸರಣಿಗಳಾದ ಗೇಮ್ ಆಫ್ ಥ್ರೋನ್ಸ್, ಸ್ಪಾರ್ಕಟಸ್ ವಿರುದ್ಧ NGO ಅಶ್ಲೀಲತೆಯ ಆರೋಪ ಮಾಡಿದೆ. ಈ ವೆಬ್ ಸರಣಿಗಳು ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುತ್ತವೆ ಎಂದು ಆರೋಪಿಸಿದೆ.
ತಜ್ಞರ ಸಮಿತಿ ಅಡಿಯಲ್ಲಿ ಹೊಸ ಮಾರ್ಗಸೂಚಿ ಅಗತ್ಯವಿದೆ ಒಟಿಟಿಗಳಿಗೆ ವಿಧಿಸಲಾಗಿರುವ ಸ್ವಯಂ ನಿರ್ಬಂಧ ಹಾಗೂ ಹೊಸ ಐಟಿ ಕಾಯ್ದೆ ತಿದ್ದುಪಡಿ ಸಹ ಒಟಿಟಿಗಳ ಕಂಟೆಂಟ್ ಅನ್ನು ನಿಯಂತ್ರಿಸಲು ಸಾಕಾಗುವುದಿಲ್ಲ ಇದಕ್ಕೆಂದೆ ತಜ್ಞರ ಸಮಿತಿಯ ಅಡಿಯಲ್ಲಿ ಹೊಸ ಮತ್ತು ಕಠಿಣ ಮಾರ್ಗಸೂಚಿಗಳು ತಯಾರಾಗಬೇಕು ಎಂದು ಎನ್‌ಜಿಓ ಹೇಳಿದೆ. ಹೀಗಾಗಿ ಒಟಿಟಿಗಳ ಕಂಟೆಂಟ್ ಬಗ್ಗೆ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ಪ್ರಕರಣಗಳಿಗೂ ನ್ಯಾಯಾಲಯವು ತಡೆ ನೀಡಿದೆ. ಮಾರ್ಚ್ 29 ರ ಬಳಿಕ ವಿಚಾರಣೆ ನಡೆಸಲಿದೆ.
RRR ಸಿನಿಮಾದಿಂದ ಸ್ಟಾರ್ ನಟಿಯನ್ನ ಕೈಬಿಟ್ಟಿದ್ದೇಕೆ ರಾಜಮೌಳು – ಯಾರು ಆ ನಟಿ..?
ಥಿಯೇರ್ ಗಳಲ್ಲಿ 50% ಸೀಟಿಂಗ್ ಭಯ – ದಯಮಾಡಿ ನಿರ್ಬಂಧ ಹೇರಬೇಡಿ : ಸರ್ಕಾರಕ್ಕೆ ‘ಸಲಗ’ನ ಮನವಿ..!