ಬಹುಬಾಷಾ ನಟ ಪ್ರಕಾಶ್ ರಾಜ್ ಅವರಿಗೆ 56 ನೇ ಹುಟ್ಟುಹಬ್ಬದ ಸಂಭ್ರಮ..!
ಮೂಲತಹ ಕನ್ನಡದವಾರಾದ್ರೂ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಸುಮಾರು 7 ಬಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮೇರು ನಟ ಪ್ರಕಾಶ್ ರಾಜ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮದೇ ಆದ ವಿಭಿನ್ನ ನಟನಾ ಶೈಲಿಯಿಂದ ಗುರುತಿಸಿಕೊಂಡಿರುವ ಪ್ರಕಾಶ್ ರಾಜ್, ಕಾಮಿಡಿ ಮಾಡಿ ಜನರನ್ನ ನಗಿಸೋದ್ರಲ್ಲೂ ಎಕ್ಸ್ ಪರ್ಟ್, ಖಳನಾಯಕನಾಗಿ ಡೇರಿಂಗ್ ಆಗಿ ಕಾಣಿಸಿಕೊಂಡು ಆ ವಿಲ್ಲನ್ ಇಮೇಜ್ ಗೆ ನ್ಯಾಯ ವದಗಿಸುತ್ತಾರೆ. ನೆಗೆಟಿವ್ ಇರಲಿ ಪಾಸಿಟಿವ್ ಇರಲಿ ಆ ಪಾತ್ರ ಎಂಥದ್ದೇ ಇರಲಿ ಎಲ್ಲಾ ಪಾತ್ರಗಳಿಗೂ ಸ್ಯೂಟ್ ಆಗೋ ಕೆಲವೇ ನಟರಲ್ಲಿ ಪ್ರಕಾಶ್ ರಾಜ್ ಸಹ ಒಬ್ರು.
ಇಂತಹ ಸ್ಟಾರ್ ಗೆ ಇಂದು 56ನೇ ಹುಟ್ಟುಹಬ್ಬದ ಸಂಭ್ರಮ. ನಟ ಪ್ರಕಾಶ್ ರಾಜ್ 1965 ಮಾರ್ಚ್ 26ರಂದು ಜನಿಸಿದ್ದು, ಆರಂಭದಲ್ಲಿ ‘ಬಿಸಿಲು ಕುದುರೆ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. 1994 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ತಮಿಳಿನ ‘ಡುಯೆಟ್’ ಎಂಬ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದರು. ಇನ್ನೂ ಪ್ರಕಾಶ್ ರಾಜ್ ಅವರು ತೆಲುಗಿನ ಪುಷ್ಪ, ಕನ್ನಡದ ಕೆಜಿಎಫ್ 2, ತೆಲುಗಿನ ವಕೀಲ್ ಸಾಬ್, ಕನ್ನಡದ ಯುವರತ್ನ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಈ ಸಿನಿಮಾಗಳು ಇನ್ನೂ ರಿಲೀಸ್ ಆಗಬೇಕಾಗಿದೆ.
ತಲೈವಿ ಟ್ರೈಲರ್ ನಲ್ಲಿದೆ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಜಯಲಲಿತಾ ಮೇಲಿನ ಹಲ್ಲೆಯ ಘಟನೆ