ಥಿಯೇರ್ ಗಳಲ್ಲಿ 50% ಸೀಟಿಂಗ್ ಭಯ – ದಯಮಾಡಿ ನಿರ್ಬಂಧ ಹೇರಬೇಡಿ : ಸರ್ಕಾರಕ್ಕೆ ‘ಸಲಗ’ನ ಮನವಿ..!

1 min read

ಥಿಯೇರ್ ಗಳಲ್ಲಿ 50% ಸೀಟಿಂಗ್ ಭಯ – ದಯಮಾಡಿ ನಿರ್ಬಂಧ ಹೇರಬೇಡಿ : ಸರ್ಕಾರಕ್ಕೆ ‘ಸಲಗ’ನ ಮನವಿ..!

ಮತ್ತೆ ರಾಜ್ಯಾ ಹಾಗೂ ರಾಷ್ಟ್ರದಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ಕೊರೊನಾ 2 ನೇ ಅಲೆ ಶುರುವಾಗಿದ್ದು, ಸರ್ಕಾರ ಮತ್ತೆ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿದೆ. ಮುಖ್ಯವಾಗಿ ಸಿನಿಮಾಗಳಲ್ಲಿ ಮತ್ತೆ 50 % ಸೀಟಿಂಗ್ ಮಾಡುವ ಪ್ಲಾನ್ ಮಾಡ್ತಿದೆ ಎನ್ನಲಾಗ್ತಿದೆ. ಇದ್ರಿಂದ ಸಿನಿಮಾ ಮಂದಿಗೆ ಭಯ ಶುರುವಾಗಿದೆ. ಮುಂದೆ  ರಿಲೀಸ್ ಹಂತದಲ್ಲಿರುವ ದೊಡ್ಡ ದೊಡ್ಡ ಸಿನಿಮಾಗಳ ಮೇಕರ್ಸ್ ಹಾಗೂ ಸ್ಟಾರ್ ಗಳಿಗೂ ಆತಂಕ ಶುರುವಾಗಿದೆ. ಅದ್ರಲ್ಲಿ ಸಲಗ ಸಿನಿಮಾ ಕೂಡ ಒಂದು.

ದುನಿಯಾ ವಿಜಿ ನಿರ್ದೇಶಿಸಿ ನಟಿಸಿರುವ ‘ಸಲಗ’ ಸಿನಿಮಾ ಏಪ್ರಿಲ್ 15 ಕ್ಕೆ ರಿಲೀಸ್ ಆಗಲಿದೆ. ಹೀಗಾಗಿ ಸರ್ಕಾರಕ್ಕೆ ದುನಿಯಾ ವಿಜಿ ಮನವಿ ಮಾಡಿಕೊಂಡಿದ್ದಾರೆ. ಹೌದು ತುಮಕೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ವಿಜಿ ಚಿತ್ರರಂಗದಲ್ಲಿಯೂ ಕೂಲಿ ಕಾರ್ಮಿಕರಿದ್ದಾರೆ. ಸಿನಿಮಾರಂಗದಲ್ಲಿ ದಿನಕ್ಕೆ 100- 500 ರುಪಾಯಿ ದುಡಿಯುವ ಸಾವಿರಾರು ಕಾರ್ಮಿಕರು ಇದ್ದಾರೆ. ಎಲೆಕ್ಟ್ರೀಶಿಯನ್‌ಗಳು, ಲೈಟ್‌ ಮ್ಯಾನ್‌ ಗಳು, ಸ್ಪಾಟ್‌ ಬಾಯ್‌ಗಳು ಹೀಗೆ ತುಂಬ ಜನರಿದ್ದಾರೆ. ಲಾಕ್ ಡೌನ್ ಅಥವ 50 % ನಿರ್ದಿಬಂಧನಿಂದ ಅವರೆಲ್ಲರಿಗೆ ಬಹಳ ತೊಂದರೆಯಾಗುತ್ತೆ. ಇದನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ  ಎಂದು ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೇ ನೀಡಲಾಗಿರುವ 100% ಸೀಟು ಭರ್ತಿ ಮಾಡಲು ಅವಕಾಶವನ್ನು ಮುಂದುವರೆಸಬೇಕು ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಮತ್ತೆ ಲಾಕ್‌ಡೌನ್ ಆದರೆ ನಾವೇನೋ ಹೀರೋಗಳು ನಡೆದು ಹೋಗುತ್ತದೆ ಆದರೆ ಕೂಲಿ ಮಾಡುವವನಿಗೆ ಹೊಡೆತ ಬೀಳುತ್ತೆ. ನಾವು ಸರ್ಕಾರ ವಿಧಿಸುವ ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತೀವಿ. ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಮಾಡಬೇಕು ಎಲ್ಲವನ್ನೂ ಪಾಲಿಸುತ್ತೀವಿ ಆದರೆ ಚಿತ್ರಮಂದಿರದಲ್ಲಿ 100% ಸೀಟು ಭರ್ತಿಗೆ ಅವಕಾಶ ಇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಬಹುಬಾಷಾ ನಟ ಪ್ರಕಾಶ್ ರಾಜ್ ಅವರಿಗೆ 56 ನೇ ಹುಟ್ಟುಹಬ್ಬದ ಸಂಭ್ರಮ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd