ಬೆಂಗಳೂರ : ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದ ಪಕ್ಷದಲ್ಲಿ ಭಿನ್ನಾಭಿಪ್ರಾಯ ಶುರುವಾಗಿದೆ. ನಳಿನ್ ಕುಮಾರ್ ಕಟೀಲ್ ಬಿಜೆಪಿ ಪಕ್ಷದ ಅಧ್ಯಕ್ಷರಿಗೆ ಏರಿ ಸುಮಾರ ದಿನಗಳು ಕಳೆದಿವೆ. ಆದರೂ ಪಕ್ಷದ ಕೆಲ ವಿಂಗ್ ಗಳಿಗೆ ಪದಾಧಿಕಾರಿಗಳು ಆಯ್ಕೆಯಾಗಿಲ್ಲ. ಅಧ್ಯಕ್ಷಗಿರಿಗೆ ಏರಿದ ಸ್ವಲ್ಪದಿನ ರಾಜ್ಯವನ್ನು ಪ್ರವಾಸ ಮಾಡಿದ್ದರೂ. ಆ ಮೇಲೆ ಮಂಗಳೂರು ಸೇರಿಕೊಂಡಿದ್ದಾರೆ. ಅವರು ಏನಾದರೂ ಕೆಲಸ ಮಾಡಬೇಕಾದರೆ ದೆಹಲಿಯಿಂದ ಕರೆ ಬರಬೇಕು. ಕರೆ ಬಂದರೆ ಮಾತ್ರ ನಳಿನ್ ಕುಮಾರ್ ಕಟೀಲ್ ಕೆಲಸ ಮಾಡುತ್ತಾರೆ. ದೆಹಲಿಯಿಂದ ಕರೆ ಬಂದ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಗೆ ಬಂದು ಒಂದು ರಾತ್ರಿಯಿದ್ದು ಮಾರನೇ ಮತ್ತೆ ಮಂಗಳೂರಿಗೆ ಪ್ರಯಾಣ ಮಾಡುತ್ತಾರೆ.
ಆದರೆ ಇದೆ ಹೊತ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಯಾವುದಾದರೂ ಒಂದು ನೆಪದಲ್ಲಿ ಪ್ರಚಾರದಲ್ಲಿರುತ್ತಾರೆ. ಒಂದೆಡೆ ಮಹಿಳಾ ಮೋರ್ಚಾ, ಯುವಜನ ಮೋರ್ಚಾ, ರೈತ ಮೋರ್ಚಾ, ಸೇರಿದಂತೆ ಪಕ್ಷದ ಬೇರೆ ಬೇರೆ ವಿಂಗ್ ಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿಲ್ಲ, ಮತ್ತೊಂದೆಡೆ ಮಂಗಳೂರು ಬಿಟ್ಟು ಬರುವುದಿಲ್ಲ ಎಂಬ ಅಸಮಾಧಾನ ಬಿಜೆಪಿ ನಾಯಕರು ನಳಿನ್ ಕುಮಾರ್ ಕಟೀಲ್ ವಿರುದ್ದ ಹೊರ ಹಾಕಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದರೇ ಸದ್ದಿಲ್ಲದೆ ಬಿಜೆಪಿಯಲ್ಲಿ ಶೀತಲ ಸಮರ ನಡೆದಿದೆ ಎಂಬು ಸಾಬೀತಾಗುತ್ತದೆ. ಇನ್ನೊಂದೆಡೆ ಮೊದಲಿಂದಲೂ ಬಿಎಸ್ ವೈ ಬಳಗದಲ್ಲಿ ಗುರುತಿಸಿಕೊಂಡ ಕೆಲ ಬಿಜೆಪಿ ನಾಯಕರು ನಳಿನ್ ಕುಮಾರ್ ಕಟೀಲ್ ವಿರುದ್ದ ಇದೆ ವಿಚಾರವನ್ನು ಅಸ್ತ್ರವಾಗಿ ಬಳಸುವ ಸಾಧ್ಯತೆಯಿದೆ .








