Meghalaya: ಅಪ್ಪಳಿಸಿದ ಚಂಡಮಾರುತ | 1000ಕ್ಕೂ ಹೆಚ್ಚು ಮನೆಗೆಳು ಹಾನಿ

1 min read
Meghalaya Saaksha Tv

ಅಪ್ಪಳಿಸಿದ ಚಂಡಮಾರುತ | 1000ಕ್ಕೂ ಹೆಚ್ಚು ಮನೆಗೆಳು ಹಾನಿ

ಶಿಲ್ಲಾಂಗ್: ಮೇಘಾಲಯದಲ್ಲಿ ಚಂಡಮಾರುತ ಬೀಸಿದ ಪರಿಣಾಮ 1000ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ.

ಮೇಘಾಲಯದ ರಿ-ಭೋಯ್ ಜಿಲ್ಲೆಯಲ್ಲಿ ಗುರುವಾರ ಬೀಸಿದ ಚಂಡಮಾರುತದಿಂದ ಜಿಲ್ಲೆಯ 47 ಗ್ರಾಮಗಳು ಹಾನಿಗೊಳಗಾಗಿವೆ. ಹಾಗೇ ಜಿಲ್ಲೆಯ ಬಿಡಿಒ ಕಚೇರಿ, ಶಾಲೆ, ಲೋಕೋಪಯೋಗಿ ಇಲಾಖೆ ಕಚೇರಿ, ಪಶುವೈದ್ಯಕೀಯ ಕಚೇರಿಗಳು ಸೇರಿದಂತೆ ಸರ್ಕಾರಿ ಆಸ್ತಿ, ಪಾಸ್ತಿಗಳು ಚಂಡಮಾರುತದಿಂದ ನಾಶಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Meghalaya Saaksha Tv

ಅದೃಷ್ಟವಶಾತ್ ಚಂಡಮಾರುತದಿಂದ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ. ಇದೀಗ ಹಾನಿಗೊಳಗಾದ ಗ್ರಾಮಗಳಲ್ಲಿ ಜನರ ತೆರವು ಕಾರ್ಯ ನಡೆಯುತ್ತಿದ್ದು, ಜನರನ್ನು ಬೇರೆಡೆ ವರ್ಗಾಯಿಸುವ ಕಾರ್ಯಗಳನ್ನು ನಡೆಸಲಾಗುತ್ತಿಗುತ್ತಿದೆ.

ಇನ್ನೂ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಆಯಾ ಬಿಡಿಒಗಳೊಂದಿಗೆ ತುರ್ತು ಸಭೆ ನಡೆಸಲಗುತ್ತಿದೆ. ಪರಿಸ್ಥಿತಿಯ ನಿಭಾಯಿಸ ಅವಲೋಕನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd