ಆಂಧ್ರ ಪ್ರದೇಶದಲ್ಲಿ 2.33 ಕೋಟಿ ರೂಪಾಯಿ ಮೌಲ್ಯದ 1,169.3 ಕೆಜಿ ಗಾಂಜಾ ವಶಕ್ಕೆ
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ತಂಡವು 2.33 ಕೋಟಿ ರೂಪಾಯಿ ಮೌಲ್ಯದ 1,169.3 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದೆ.
ಅನಕಪಲ್ಲಿಯಿಂದ ವಿಜಯವಾಡದ ಮೂಲಕ ಹೈದರಾಬಾದ್ ಕಡೆಗೆ NH-16 ರಲ್ಲಿ ಯುಪಿ ನೋಂದಣಿಯನ್ನು ಹೊಂದಿರುವ ಟಾಟಾ ಟ್ರಕ್ನಲ್ಲಿ ಒಬ್ಬ ವ್ಯಕ್ತಿ ಗಣನೀಯ ಪ್ರಮಾಣದ ಗಾಂಜಾ ಸಾಗಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಶಾಖಪಟ್ಟಣಂ ಪ್ರಾದೇಶಿಕ ಘಟಕದಿಂದ ಡಿಆರ್ಐ ಅಧಿಕಾರಿಗಳು ಏಪ್ರಿಲ್ 17 ರಂದು ಮುಂಜಾನೆ ದಾಳಿಮಾಡಿದ್ದಾರೆ. ಅನಕಪಲ್ಲಿ ಜಿಲ್ಲೆಯ ಗೊಬ್ಬೂರು ಬಳಿಯ NH-16 ರ ಕಂದಕದಲ್ಲಿ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಟ್ರಕ್ ಕಂಡುಬಂದಿದೆ.
ಟ್ರಕ್ನಲ್ಲಿ ಹಳೆಯ ಖಾಲಿ ಗೋಣಿ ಚೀಲಗಳ ಮಧ್ಯೆ ಮರೆಮಾಚಿ ಕಳ್ಳಸಾಗಣೆ ನಡೆಸುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.
ಅಧಿಕಾರಿಗಳು ಕ್ರೇನ್ ಮೂಲಕ ಟ್ರಕ್ ಅನ್ನ ಎತ್ತಿ ನಂತರ ಟ್ರಕ್ ಅನ್ನು ಸ್ಥಳಾಂತರಿಸಿದ್ದಾರೆ. ಸೂಕ್ತ ವಿಧಾನಗಳ ನಂತರ, 1169.30 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.