Heavy Rain | ಮಳೆ ಅಬ್ಬರಕ್ಕೆ ರಾಜ್ಯಗಳು ತತ್ತರ
ತೆಲಂಗಾಣದಲ್ಲಿ ಭಾರಿ ವರ್ಷಧಾರೆ
ದೇಶದ ಹಲವೆಡೆ ಅಪಾರ ಹಾನಿ
ಜನರ ಪ್ರಾಣ ರಕ್ಷಣೆಗೆ ಹರಸಾಹಸ
ಮಹಾರಾಷ್ಟ್ರದಲ್ಲಿ 99 ಸಾವು
ಭಾರತದ ಮಧ್ಯ ಮತ್ತು ಪಶ್ವಿಮ ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ನಾನಾ ಅವಾಂತರಗಳನ್ನು ಸೃಷ್ಟಿಸುತ್ತಿದ್ದಾನೆ.
ಛತ್ತೀಸ್ ಗಡ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಮಳೆ ಅಪಾರ ಪ್ರಮಾಣದ ಹಾನಿಯನ್ನ ಉಂಟು ಮಾಡಿದೆ.
ಭಾರಿ ವರ್ಷಧಾರೆಯಿಂದಾಗಿ ಮಹಾರಾಷ್ಟ್ರದಲ್ಲಿ 99 ಮಂದಿ ಮೃತಪಟ್ಟಿದ್ದರೇ ತೆಲಂಗಾಣದಲ್ಲಿ 19 ಸಾವಿರ ಮಂದಿ ಮನೆ ಕಳೆದುಕೊಂಡಿದ್ದು, ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ದಕ್ಷಿಣ ಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ತೆಲಂಗಾಣದ ಮಂಚೇರಿಯನ್ ನಲ್ಲಿ ಭಾರಿ ಮಳೆಗೆ ಪ್ರವಾಹ ಉಂಟಾಗಿದೆ.

ಅವರನ್ನ ವಾಯುಪಡೆ ಹೆಲಿಕ್ಯಾಪ್ಟರ್ ಮೂಲಕ ರಕ್ಷಣೆ ಮಾಡಿದೆ. ಇನ್ನು ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಳೂ ಮಳೆ ಜೋರಾಗಿದೆ.
ಅಲ್ಲಲ್ಲಿ ಬೆಟ್ಟ ಗುಡ್ಡಗಳು ಕುಸಿಯುತ್ತಿವೆ. ಉತ್ತರ ಕರ್ನಾಟಕದಲ್ಲೂ ಕೂಡ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಸದ್ಯ ಕರ್ನಾಟಕದ ಬಹುತೇಕ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ.
ಹೀಗಾಗಿ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ಇನ್ನು ಮುಂಬರುವ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.