Pakistan | ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಎಷ್ಟು ಗೊತ್ತಾ..?
ಪಾಕಿಸ್ತಾನದಲ್ಲಿ 22,10,566 ಹಿಂದೂಗಳು ವಾಸಿಸುತ್ತಿದ್ದಾರೆ ಎಂದು ಒಂದು ವರದಿ ಪ್ರಕಟಿಸಿದೆ.
ದೇಶದಲ್ಲಿ ನೋಂದಣಿಯಾಗಿರುವ ಒಟ್ಟು 18,68,90,601 ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಪಾಲು ಕೇವಲ 1.18% ಎಂದು ಸೆಂಟರ್ ಫಾರ್ ಪೀಸ್ ಅಂಡ್ ಜಸ್ಟಿಸ್ ಪಾಕಿಸ್ತಾನ್ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

ದೇಶದ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಶೇ.5ರಷ್ಟಿದ್ದು, ಅವರಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ ಎಂದು ವರದಿ ಹೇಳಿದೆ.
ಹಿಂದೂ ಜನಸಂಖ್ಯೆಯ ಸುಮಾರು 95% ಮಂದಿ ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ.