ಮುಸ್ಲಿಮರ ನಂತರ ‘ಹಿಂದೂ ಬ್ರಿಗೇಡ್’ನ ಮುಂದಿನ ಟಾರ್ಗೆಟ್ ಕ್ರೈಸ್ತರು : ಪಿ ಚಿದಂಬರಂ
ಕೊಲ್ಕತ್ತಾ : ಮುಸ್ಲಿಮರ ನಂತರ ಈಗ ಹಿಂದೂ ಬ್ರಿಗೇಡ್ ನ ಮುಂದಿನ ಟಾರ್ಗೆಟ್ ಕ್ರೈಸ್ತರು ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಪಿ.ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.. ಅಲ್ಲದೇ ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೆಸಾ ಮಿಷನರೀಸ್ ಆಫ್ ಚಾರಿಟಿ ಖಾತೆ ನವೀಕರಣವನ್ನು ನಿರಾಕರಿಸುವ ಮೂಲಕ ಬಡವರು ಹಾಗೂ ಉತ್ತಮ ಸೇವೆ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ದೇ ರಾಷ್ಟ್ರೀಯ ಪ್ರಮುಖ ವಾಹಿನಿಗಳು ಈ ಬಗ್ಗೆ ಸುದ್ದಿ ಮಾಡಿಲ್ಲವೆಂದು ಪಿ ಚಿದಂಬರಂ ಆಕ್ರೋಶ ಹೊರಹಾಕಿದ್ದಾರೆ.
ತಾಯಿಯ ಮೇಲೆ ಹಲ್ಲೆ ಮಾಡಿದಕ್ಕೆ ಸಂಬಂಧಿಯನ್ನ ಕೊಲೆ ಮಾಡಿದ ಹುಡುಗಿಯರು
ಕೋಲ್ಕತ್ತ, ಪಶ್ಚಿಮ ಬಂಗಾಳದಲ್ಲಿ ಮಿಷನರೀಸ್ ಆಫ್ ಚಾರಿಟಿಗೆ ಭವಿಷ್ಯದ ವಿದೇಶ ದೇಣಿಗೆ ನಿರಾಕರಿಸಲಾಗಿರೋದು, ಭಾರತದಲ್ಲಿ ಬಡವರು ಹಾಗೂ ದಲಿತರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೆಸಾ ಅವರ ಸ್ಮರಣೆಗೆ ಆದ ದೊಡ್ಡ ಅವಮಾನ ಎಂದು ಕಿಡಿಕಾರಿದ್ದಾರೆ.








