PAK vs AUS TEST: ವಾರ್ನರ್ vs ಶಾಹೀನ್ ಆಫ್ರಿದಿ ಫನ್ನಿ ಮುಖಾಮುಖಿ…
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದ ಕೊನೆಯ ಎಸೆತದಲ್ಲಿ ಡೇವಿಡ್ ವಾರ್ನರ್ ಮತ್ತು ಶಾಹೀನ್ ಶಾ ಆಫ್ರಿದಿ ನಡುವೆ ತಮಾಷೆಯ ಪ್ರಸಂಗ ನಡೆಯಿತು. ಶಾಹೀನ್ ಶಾ ಆಫ್ರಿದಿ ಎಸೆದ ಶಾರ್ಟ್ ಬಾಲ್ ನ್ನ ವಾರ್ನರ್ ಬಹಳ ಸುಲಭವಾಗಿ ತಡೆದು ನಿಲ್ಲಿಸಿದರು. ಇದರ ನಂತರ ಅಫ್ರಿದಿ ಫಾಲೋ ಥ್ರೂನಲ್ಲಿ ಓಡುತ್ತಾ ವಾರ್ನರ್ ಕಡೆ ನಡೆದರು. ಇಬ್ಬರೂ ಆಟಗಾರರು ಕಣ್ಣಲ್ಲಿ ಕಣ್ಣಿಟ್ಟು ದುರುಗುಟ್ಟಿಕೊಂಡು ನೋಡಿದರು. ಮೊದ ಮೊದಲು ಇದು ಇಬ್ಬರ ನಡುವಿನ ಜಗಳದಂತೆ ಕಂಡರೂ ತಕ್ಷಣ ಇಬ್ಬರೂ ನಗತೊಡಗಿದರು. ನಂತರ ವಾರ್ನರ್ ಅಫ್ರಿದಿ ಬೆನ್ನು ತಟ್ಟಿದರು. ಇದಾನಂತರ ಅಫ್ರಿದಿ ಕೂಡ ನಕ್ಕು ಮುನ್ನಡೆದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
What a way to conclude the day 😄 #BoysReadyHain l #PAKvAUS pic.twitter.com/FafG8lkVTT
— Pakistan Cricket (@TheRealPCB) March 23, 2022
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ವಾರ್ನರ್ ತಮಾಷೆಯ ಶೈಲಿಗೆ ಹೆಸರುವಾಸಿ. ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಫನ್ನಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ, ವಾರ್ನರ್ ಅವರ ಇಡೀ ಕುಟುಂಬ “ ಪುಷ್ಪಾ” ಚಿತ್ರದ ರೀಲ್ಸ್ ಮಾಡಿದ್ದು ಭಾರತದಲ್ಲಿ ಟ್ರೆಂಡ್ ಆಗಿತ್ತು.
ಇನ್ನೂ ಪಂದ್ಯದ ಬಗ್ಗೆ ಮಾತನಾಡುವುದಾದರೆ… ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ 134 ರನ್ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 391 ರನ್ ಗಳಿಸಿ ಪಾಕಿಸ್ತಾನವನ್ನು 268 ರನ್ಗಳಿಗೆ ಆಲೌಟ್ ಮಾಡಿತ್ತು. ಪ್ಯಾಟ್ ಕಮಿನ್ಸ್ ಐದು ಮತ್ತು ಮಿಚೆಲ್ ಸ್ಟಾರ್ಕ್ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಪಾಕಿಸ್ತಾನ ಕೇವಲ ನಾಲ್ಕು ರನ್ಗಳಿಗೆ ಕೊನೆಯ ಐದು ವಿಕೆಟ್ಗಳನ್ನು ಕಳೆದುಕೊಂಡು ಕುಸಿತ ಕಂಡಿತು.
ಪಾಕಿಸ್ತಾನದ ಆರಂಭ ಅದ್ಭುತವಾಗಿತ್ತು. ಮೊದಲ ವಿಕೆಟ್ ಪತನದ ನಂತರ ಅಬ್ದುಲ್ಲಾ ಶಫೀಕ್ (81) ಮತ್ತು ಅಜರ್ ಅಲಿ (78) ಎರಡನೇ ವಿಕೆಟ್ಗೆ 150 ರನ್ ಜೊತೆಯಾಟ ನಡೆಸಿದರು. ಇದರ ನಂತರ ಬಾಬರ್ (67) ಬ್ಯಾಟಿಂಗ್ಗೆ ಇಳಿದರು. ಅಜರ್ ಅವರೊಂದಿಗೆ 44 ರನ್ಗಳ ಜೊತೆಯಾಟ ಹಂಚಿಕೊಂಡರು. 214 ರನ್ಗಳಿಗೆ ತಂಡ ಮೂರು ವಿಕೆಟ್ ಕಳೆದುಕೊಂಡಿತ್ತು. ಆಸ್ಟ್ರೇಲಿಯದ ಸ್ಕೋರ್ ನ್ನು ಪಾಕಿಸ್ತಾನ ಸುಲಭವಾಗಿ ಬೆನ್ನತ್ತುತ್ತದೆ ಎಂದು ಅನಿಸಿತ್ತು. ನಂತರ ಆಸ್ಟ್ರೇಲಿಯದ ಬೌಲರ್ಗಳು ಪಾಕಿಸ್ತಾನದ ಬ್ಯಾಟ್ಸ್ಮನ್ಗಳಿಗೆ ಫೆವಿಲಿಯನ್ ಹಾದಿ ತೋರಿಸಿದರು.
PAK vs AUS TEST: David Warner, Shaheen Afridi face off in hilarious confrontation on Day 3 of Lahore Test