PAK VS SA: ಸೆಮೀಸ್ ಹಾದಿ ಖಚಿತಪಡಿಸಿಕೊಳ್ಳಲು ದಕ್ಷಿಣ ಆಫ್ರಿಕಾ ತಯಾರಿ…
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹತ್ವದ ಪಂದ್ಯಕ್ಕೆ ಇಂದು ವೇದಿಕೆ ಸಜ್ಜಾಗಿದೆ. ಇಂದು ಮಧ್ಯಾಹ್ನ 1.30ಕ್ಕೆ ಪಂದ್ಯ ಶರುವಾಗಲಿದೆ. ಸೆಮಿ ಫೈನಲ್ ರೇಸ್ ನಲ್ಲಿ ಉಳಿಯಲು ದಕ್ಷಿಣ ಆಫ್ರಿಕಾ ಇಂದು ತನ್ನೆಲ್ಲಾ ಶಕ್ತಿಯುನ್ನ ಮೀರಿ ಆಡಲಿದೆ. ಭಾರತವನ್ನ ಸೋಲಿಸಿದ್ದ ತೆಂಬಾ ಬಾವುಮಾ ತಂಡ ಉತ್ಸಾಹದಲ್ಲಿದೆ.
ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 21 ಟಿ 20 ಪಂದ್ಯಗಳು ನಡೆದಿವೆ. 11 ಪಾಕಿಸ್ತಾನ ಮತ್ತು 10 ದಕ್ಷಿಣ ಆಫ್ರಿಕಾ ಗೆದ್ದಿವೆ. ಇದೀಗ ಈ ವಿಶ್ವಕಪ್ನ 36ನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಪಾಕಿಸ್ತಾನದ ಸೆಮಿಪೈನಲ್ ನ ಕನಸು ಬಹುತೇಕ ಭಗ್ನಗೊಂಡಿದ್ದು, ಒತ್ತಡದಲ್ಲಿ ಬಾಬರ್ ಅಜಮ್ ತಂಡ ಇದೆ. ಸದ್ಯ ಗ್ರೂಪ್ 2ರ ಪಾಯಿಂಟ್ಸ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ. ಆಫ್ರಿಕಾ ತಂಡ ಈ ಟೂರ್ನಿಯಲ್ಲಿ ಇದುವರೆಗೆ ಯಾವುದೇ ಪಂದ್ಯವನ್ನು ಸೋತಿಲ್ಲ ಈಗಾಗಿ ಪಾಕಿಸ್ತಾನದ ವಿರುದ್ಧ ಗೆಲ್ಲುವ ಮೂಲಕ ಸೆಮಿಸ್ ಟಿಕೆಟ್ ಅನ್ನು ಖಚಿತ ಪಡಿಸಿಕೊಳ್ಳಲು ಬಯಸುತ್ತದೆ.
ಹವಾಮಾನದ ಮಟ್ಟಿಗೆ ಹೇಳುವುದಾದರೆ, ಈ ಪಂದ್ಯದ ಮೇಲೆ ಮಳೆಯ ಛಾಯೆಯೂ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯ ಪ್ರಕಾರ ಮಳೆಯ ಸಂಭವನೀಯತೆ 40% ಇದೆ.
PAK VS SA: Pakistan South Africa World Cup Match