ಎಚ್ಚರಿಕೆ…! ಪಾಕ್ ಬಿಡುಗಡೆ ಮಾಡಿದೆ ನಕಲಿ ಆರೋಗ್ಯಸೇತು ಆ್ಯಪ್ !
ಹೊಸದಿಲ್ಲಿ, ಜೂನ್ 11: ಭಾರತದಲ್ಲಿ 10 ಕೋಟಿಗೂ ಅಧಿಕ ಡೌನ್ಲೋಡ್ ಕಂಡಿರುವ, ವಿಶ್ವದ ಟಾಪ್ ಎಂಟು ಆ್ಯಪ್ ಗಳ ಪಟ್ಟಿಯಲ್ಲಿರುವ ಕೊರೊನಾ ಸೋಂಕು ಪತ್ತೆ ಹಚ್ಚಲು ಭಾರತೀಯರೇ ಅಭಿವೃದ್ಧಿ ಪಡಿಸಿರುವ ಆರೋಗ್ಯ ಸೇತು ಆ್ಯಪ್ ನ ಜನಪ್ರಿಯತೆಯನ್ನು ನೋಡಿ ಹತಾಶೆಗೊಂಡಿರುವ ಪಾಕ್ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದೆ. ಪಾಕಿಸ್ತಾನ ಭಾರತದ ಆರೋಗ್ಯ ಸೇತು ಆ್ಯಪ್ ಗೆ ಬದಲಾಗಿ ನಕಲಿ ಆರೋಗ್ಯಸೇತು ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರದ ಸೈಬರ್ ಇಲಾಖೆಯ ಐಜಿ ಯಶಸ್ವಿ ಯಾದವ್ ಈ ಬಗ್ಗೆ ಎಚ್ಚರಿಸಿದ್ದು, ಪಾಕಿಸ್ತಾನದ ಹ್ಯಾಕರ್ ಗಳು ಭಾರತೀಯ ಪ್ರಜೆಗಳ ಹಾಗೂ ಸೇನೆಯ ಮಾಹಿತಿ ಕದಿಯಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಆ್ಯಪ್ ಗಳನ್ನು ಡೌನ್ಲೋಡ್ ಮಾಡುವಾಗ ಜಾಗರೂಕತೆಯಿಂದ ಇರುವಂತೆ ಸೂಚಿಸಿದ್ದಾರೆ ಮತ್ತು ನಕಲಿ ಆ್ಯಪ್ ತಡೆಗಟ್ಟಲು ಕೆಲವೊಂದು ಮಾರ್ಗಸೂಚಿಗಳನ್ನು ತಿಳಿಸಿದ್ದಾರೆ.
1. ಭಾರತದ ಅಸಲಿ ಆರೋಗ್ಯ ಸೇತು ಆ್ಯಪ್ ಎಕ್ಸ್ಟೆನ್ಷನ್ ಫೈಲ್ನ ಹೆಸರು gov.in ಎಂದು ಇದೆ.
ಪಾಕ್ ನ ನಕಲಿ ಆ್ಯಪ್ ನ ಎಕ್ಸ್ಟೆನ್ಷನ್ ಫೈಲ್ನ ಹೆಸರು Apk ಎಂದು ಇದೆ.
2. ಆರೋಗ್ಯ ಸೇತು ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ನಲ್ಲಿ ಮಾತ್ರವೇ ಡೌನ್ಲೋಡ್ ಮಾಡಿ.
3. ಮೆಸೇಜ್ ಗೆ ಆರೋಗ್ಯ ಸೇತು ಹೆಸರಿನಲ್ಲಿ ಯಾವುದೇ ಲಿಂಕ್ ಬಂದರೂ ಅದನ್ನು ಡೌನ್ಲೋಡ್
ಅಥವಾ ಕ್ಲಿಕ್ ಮಾಡಲು ಹೋಗಲೇ ಬೇಡಿ.
4. ಮೊಬೈಲ್ ಗೆ ಅನುಮಾನಾಸ್ಪದ ಲಿಂಕ್ ಬಂದ ಪಕ್ಷದಲ್ಲಿ ಕೂಡಲೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ.








