Pakistan : ಹಿಂದೂ ವಿವಾಹಿತ ಮಹಿಳೆಯ ಅಪಹರಣ , ಬಲವಂತವಾಗಿ ಮತಾಂತರಕ್ಕೆ ಯತ್ನ , ಒಪ್ಪದಕ್ಕೆ ಸಾಮೂಹಿಕ ಅತ್ಯಾಚಾರ
ಹಿಂದೂ ವಿವಾಹಿತ ಮಹಿಳೆಯನ್ನು ಕಿಡ್ನಾಪ್ ಮಾಡಿದ್ದ ಕಿಡಿಗೇಡಿಗಳು ಆಕೆಯನ್ನ ಬಲವಂತವಾಗಿ ಮತಾಂತರಿಸಲು ಯತ್ನಿಸಿದ್ದು ಒಪ್ಪದೇ ಹೋದಾಗ ಸಾಮೂಹಿಕ ಅತ್ಯಾಚಾರವೆಸಗಿರುವ ಹೇಯಾತಿ ಹೇಯ ಕೃತ್ಯ ಪಾಕಿಸ್ತಾನದಲ್ಲಿ ನಡೆದಿದೆ..
ಆಕೆಯನ್ನಅಪಹರಿಸಿ ಇಸ್ಲಾಂಗೆ ಮತಾಂತರಗೊಳ್ಳಲು ಯತ್ನಿಸಿದ್ದು , ನಿರಾಕರಿಸಿದ್ದಕ್ಕೆ ಸತತ ಮೂರು ದಿನಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ..
ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಅಪಹರಣಕಾರರು ಇಸ್ಲಾಂಗೆ ಮತಾಂತರಗೊಳ್ಳುವಂತೆ ಮಹಿಳೆಯನ್ನ ಬೆದರಿಸಿದ್ದಾರೆ. ಆಕೆ ತನ್ನ ಧರ್ಮ ಬದಲಾಯಿಸಲು ನಿರಾಕರಿಸಿದ್ದರಿಂದ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ.
ಉಮರ್ ಕೋಟ್ ಜಿಲ್ಲೆಯ ಸಮರೋ ಪಟ್ಟಣದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಸಂತ್ರಸ್ತ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸಂತ್ರಸ್ತೆ ದೂರು ನೀಡಿದ್ದರೂ ಮಿರ್‌ಪುರ್ಖಾಸ್‌ನ ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆ ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆಯ ಮುಂದೆಯೇ ಧರಣಿ ಕುಳಿತಿದ್ದು, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಇಬ್ರಾಹಿಂ ಮ್ಯಾಂಗ್ರಿಯೋ, ಪುನ್ಹೋ ಮ್ಯಾಂಗ್ರಿಯೋ ಮತ್ತವರ ಸಹಚರರು ನನ್ನನ್ನ ಅಪಹರಿಸಿದ್ದರು. ಅಲ್ಲದೇ ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆಯೊಡ್ಡಿದ್ದರು. ಮತಾಂತರಗೊಳ್ಳಲು ನಿರಾಕರಿಸಿದಾಗ ಸತತ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ನಂತರ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಮನೆಗೆ ಮರಳಿದೆ ಎಂದು ಸಂತ್ರಸ್ತೆ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಹೆಚ್ಚಿನ ಹಿಂದೂಗಳು ನೆಲೆಸಿರುವ ಪಾಕಿಸ್ತಾನದ ಥಾರ್, ಉಮರ್ ಕೋಟ್, ಮಿರ್‌ಪುರ್ಖಾಸ್, ಘೋಟ್ಕಿ ಮತ್ತು ಖೈರ್ ಪುರ್ ಪ್ರದೇಶಗಳಲ್ಲಿ ಹೆಣ್ಣುಮಕ್ಕಳ ಅಪಹರಣ, ಬಲವಂತದ ಮತಾಂತರ ಪ್ರಕರಣಗಳು ಹೆಚ್ಚು ಸಮಸ್ಯೆಯಾಗಿದೆ. ಕಳೆದ ವರ್ಷವೂ ಹಿಂದೂ ಅಪ್ರಾಪ್ತೆಯನ್ನ ಅಪರಿಸಿ ನಂತರ ಇಲ್ಲಿನ ನ್ಯಾಯಾಲಯದಲ್ಲಿ ಬಲವಂತದಿಂದ ಇಸ್ಲಾಂಗೆ ಮತಾಂತರಗೊಂಡು ನಂತರ ಆಕೆ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು.
Pakistan , hindu married women kidnaped and raped by gang , after not convinced to convert into islam