ಪಾಕಿಸ್ತಾನವೇ ತಾಲಿಬಾನ್ ನ ಸೃಷ್ಟಿಕರ್ತ : ಸಂಜಯ್ ರಾವತ್
ಮುಂಬೈ : ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ಪಾಕಿಸ್ತಾನವೇ ಕಾರಣವಾಗಿದೆ. ಪಾಕಿಸ್ತಾನವೇ ತಾಲಿಬಾನ್ ನ ಸೃಷ್ಟಿಕರ್ತ ರಾಷ್ಟ್ರವಾಗಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ತಿಳಿಸಿದ್ದಾರೆ.
ಮಾತುಕತೆ ಸ್ಥಗಿತವಾಗಲು ಆರ್‍ಎಸ್‍ಎಸ್ ಕಾರಣ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಜತ್ ರಾವತ್, ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ಪಾಕಿಸ್ತಾನವೇ ಕಾರಣವಾಗಿದೆ. ಪಾಕಿಸ್ತಾನವೇ ತಾಲಿಬಾನ್ ನ ಸೃಷ್ಟಿಕರ್ತ ರಾಷ್ಟ್ರವಾಗಿದೆ. ತಾಲಿಬಾನ್ ಸಹಾಯದಿಂದ ಪಾಕಿಸ್ತಾನ ಹರಡಿದ ಭಯೋತ್ಪಾದನೆಯ ಪರಿಣಾಮವನ್ನು ಇಡೀ ಜಗತ್ತು ಅನುಭವಿಸಬೇಕಾಗಿದೆ, ಇಮ್ರಾನ್ ಖಾನ್ ಅವರನ್ನು ನಂಬಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದೆ. ಇದು ಇಡೀ ದೇಶದ ಜನರ ಭಾವನೆ. ಆರ್ ಎಸ್ ಎಸ್ ಐಡಿಯಾಲಜಿ ಬಗ್ಗೆ ಪಾಕ್ ಪ್ರಧಾನಿ ಟೀಕಿಸುವುದು ಸರಿಯಲ್ಲ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.