Pakistan : ಪಾಕಿಸ್ತಾನಕ್ಕೆ ಶಾಕ್ ನೀಡಿದ ರಷ್ಯಾ
ಪಾಕಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ತೈಲಕ್ಕಾಗಿ ಹೆಣಗಾಡುತ್ತಿದೆ. ಇದೇ ವೇಳೆ ಭಾರತಕ್ಕೆ ರಿಯಾಯಿತಿ ದರದಲ್ಲಿ ರಷ್ಯಾ ಕಚ್ಚಾ ತೈಲವನ್ನು ಪೂರೈಸುತ್ತಿದೆ. ತಮಗೂ ಭಾರತಕ್ಕೆ ನೀಡಿದ ರಿಯಾಯಿತಿಯಲ್ಲಿ ಕಚ್ಚಾ ತೈಲವನ್ನು ಪೂರೈಸುವಂತೆ ಪಾಕಿಸ್ತಾನ ರಷ್ಯಾವನ್ನು ಕೇಳಿಕೊಂಡಿದೆ.
ಆದರೆ ಆ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ರಷ್ಯಾ, ರಿಯಾಯಿತಿ ದರದಲ್ಲಿ ಕಚ್ಚಾ ತೈಲ ನೀಡಲು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನಕ್ಕೆ ಹೇಳಿದೆ.
ಮಾಸ್ಕೋದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗಿನ ಮಾತುಕತೆ ವೇಳೆ ಪಾಕಿಸ್ತಾನವು ಭಾರತ ನೀಡುತ್ತಿರುವ ದರವೇ ಪಾಕಿಸ್ತಾನಕ್ಕೂ ಅನ್ವಯವಾದರೆ ರಷ್ಯಾದಿಂದ ಇಂಧನ ಖರೀದಿಸಲು ದೇಶ ಸಿದ್ಧವಿದೆ ಎಂದು ಮನವಿ ಮಾಡಿತ್ತು. ಆದರೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ರಷ್ಯಾ ಕಚ್ಚಾ ತೈಲದ ಮೇಲೆ 30% ನಿಂದ 40%ರಷ್ಟು ರಿಯಾಯಿತಿ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದೆ.
Pakistan: Russia shocked Pakistan