Pakistan – ಟೀಂ ಇಂಡಿಯಾ ಗೆಲುವಿಗಾಗಿ ಪಾಕ್ ಫ್ಯಾನ್ಸ್ ಪ್ರಾರ್ಥನೆ
ಕ್ರಿಕೆಟ್ ಆಗಿರಲಿ.. ಯುದ್ಧ ಆಗರಲಿ.. ಇಲ್ಲಾ ಬೇರೆ ಯಾವುದೇ ವಿಚಾರವಾಗಿರಲಿ.. ಭಾರತದ ಸೋಲನ್ನ ಪಾಕಿಸ್ತಾನ ಬಯಸೋದು ಸಾಮಾನ್ಯ.
ಆದ್ರೆ ಟಿ 20 ವಿಶ್ವಕಪ್ 2022 ರಲ್ಲಿ ಮಾತ್ರ ಟೀಂ ಇಂಡಿಯಾ ಗೆಲುವಿಗೆ ಪಾಕಿಸ್ತಾನ ತಂಡದ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.
ಗ್ರೂಪ್ ಹಂತದಲ್ಲಿ ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಗೆಲುವು ಸಾಧಿಸಬೇಕು ಎಂದು ಪಾಕಿಸ್ತಾನ ಕೋರಿಕೊಳ್ಳುತ್ತಿದೆ.
ಮುಖ್ಯವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭಾರಿ ಅಂತರದಲ್ಲಿ ಗೆಲುವು ಸಾಧಿಸಬೇಕು ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.
ಯಾಕೆಂದರೆ ಟೀಂ ಇಂಡಿಯಾ ಸದ್ಯ ಸತತ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳೊಂದಿಗೆ ಗ್ರೂಪ್ ಟಾಪರ್ ಆಗಿ ನಿಂತಿದೆ.
ಇದೇ ಗ್ರೂಪ್ ನಲ್ಲಿರುವ ಪಾಕಿಸ್ತಾನ ಎರಡು ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಇನ್ನು ದಕ್ಷಿಣ ಆಫ್ರಿಕಾ ತಂಡ ಎರಡು ಪಂದ್ಯಗಳಲ್ಲಿ ಮೂರು ಅಂಕ, ಜಿಂಬಾಬ್ವೆ ಎರಡು ಪಂದ್ಯಗಳಲ್ಲಿ ಮೂರು ಅಂಕ, ಬಾಂಗ್ಲಾದೇಶ 2 ಪಂದ್ಯಗಳಿಂದ 2 ಅಂಕಗಳೊಂದಿಗೆ 2,3,4 ನೇ ಸ್ಥಾನದಲ್ಲಿದ್ದು,. ನೆದರ್ ಲೆಂಡ್ ನಾಲ್ಕನೇ ಸ್ಥಾನದಲ್ಲಿದೆ.
ಪಾಕಿಸ್ಥಾನ ತಂಡ ಸೆಮೀಸ್ ಸೇರಬೇಕಾದ್ರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು. ಸೌಥ್ ಆಫ್ರಿಕಾ, ಬಾಂಗ್ಲಾದೇಶ, ನೆದರ್ ಲೆಂಡ್ ವಿರುದ್ಧ ಗೆಲುವು ಸಾಧಿಸಬೇಕು.
ಜೊತೆಗೆ ಟೀಂ ಇಂಡಿಯಾ ಮುಂದಿನ ಮೂರು ಪಂದ್ಯಗಳನ್ನು ಅಂದರೆ ಸೌಥ್ ಆಫ್ರಿಕಾ, ಬಾಂಗ್ಲಾದೇಶ, ಜಿಂಬಾಬ್ವೆ ತಂಡಗಳ ವಿರುದ್ಧ ಗೆಲುವು ಸಾಧಿಸಬೇಕು.
ಈ ಸಮೀಕರಣದ ಜೊತೆಗೆ ಸೌತ್ ಆಫ್ರಿಕಾ, ಜಿಂಬಾಬ್ವೆ ಆಡುವ ಮೂರು ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲ್ಲಬೇಕು.
ಇದೆಲ್ಲಾ ನಡೆದರೇ ಭಾರತ 10 ಅಂಕಗಳೊಂದಿಗೆ, ಪಾಕಿಸ್ತಾನ ಆರು ಅಂಕಗಳೊಂದಿಗೆ ಗ್ರೂಪ್ 2 ರಿಂದ ಸೆಮೀಸ್ ಗೆ ಅರ್ಹತೆ ಪಡೆಯುತ್ತವೆ.
ಈ ಸಮೀಕರ ನಡೆಯಬೇಕಾದ್ರೆ ಗ್ರೂಪ್ 2 ರಲ್ಲಿ ನಡೆಯುವ ಯಾವುದೇ ಪಂದ್ಯಕ್ಕೂ ವರುಣ ಅಡ್ಡಿ ಪಡಿಸಬಾರದು.
ಹಾಗೇ ಟೀಂ ಇಂಡಿಯಾ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಭಾರಿ ಅಂತರದ ಗೆಲುವು ಸಾಧಿಸಬೇಕು.
ಹೀಗಾಗಿ ಟೀಂ ಇಂಡಿಯಾದ ಗೆಲುವಿಗಾಗಿ ಪಾಕಿಸ್ತಾನ ತಂಡ ಸೇರಿದಂತೆ ಅದರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.