ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ನುಸುಳುಕೋರನ್ನ ಹೊಡೆದುರುಳಿಸಿದ ಆರ್ಮಿ
1 min read
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ನುಸುಳುಕೋರನ್ನ ಹೊಡೆದುರುಳಿಸಿದ ಆರ್ಮಿ
ಜಮ್ಮು ಮತ್ತು ಕಾಶ್ಮೀರದ ಕೇರಾನ್ನಲ್ಲಿ ಪಾಕಿಸ್ತಾನಿ ಒಳನುಸುಳುಕೋರ ನನ್ನ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಮೃತ ವ್ಯಕ್ತಿಯಿಂದ ಎಕೆ-47 ರೈಫಲ್ ಮತ್ತು 7 ಗ್ರೆನೇಡ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕೆರಾನ್ ಸೆಕ್ಟರ್ನಲ್ಲಿ ಮೊಹಮ್ಮದ್ ಸಬ್ಬೀರ್ ಮಲಿಕ್ ಎಂಬ ಭಯೋತ್ಪಾದಕನನ್ನ ಪಾಕಿಸ್ತಾನಿ ನುಸುಳುಕೋರ ದು ಗುರುತಿಸಲಾಗಿದೆ.
ಮೇಜರ್ ಜನರಲ್ ಅಭಿಜಿತ್ ಪೆಂಧಾರ್ಕರ್ ಅವರು, ಒಳನುಗ್ಗಿದವರ ಮೃತದೇಹವನ್ನು ಹಿಂಪಡೆಯುವಂತೆ ಪಾಕಿಸ್ತಾನಿ ಸೇನೆಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಹಿಮಪಾತಕ್ಕೂ ಮುನ್ನ ಕೆರಾನ್ ಮತ್ತು ಕುಪ್ವಾರಾ ವಲಯಗಳಲ್ಲಿ ಉಗ್ರರು ಒಳನುಸುಳುವ ಸಾಧ್ಯತೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.