ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ – VIDEO
ಪಾಕಿಸ್ತಾನ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಿಡಿಗೇಡಿಗಳ ಗುಂಪೊಂದು ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದೆ. ಮುಸ್ಲಿಮರ ಗುಂಪೊಂದು ದಾಳಿ ಮಾಡಿದ್ದರಿಂದ ದೇವಾಲಯದ ಕೆಲವು ಭಾಗಗಳು ಸುಟ್ಟು ಹೋಗಿದ್ದು, ದೇವರ ಮೂರ್ತಿಗಳೂ ಹಾನಿಗೊಂಡಿವೆ.
ದೇವಾಲಯದ ಮೇಲೆ ನಡೆದ ದಾಳಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾದ ನಂತರ ಪರಿಸ್ಥಿತಿ ನಿಯಂತ್ರಿಸಲು ಪಾಕಿಸ್ತಾನಿ ರೇಂಜರ್‌ಗಳನ್ನು ಕರೆಸಲಾಗಿದೆ. ಲಾಹೋರ್‌ನಿಂದ 590 ಕಿ.ಮೀ ದೂರದಲ್ಲಿರುವ ರಹಿಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದಲ್ಲಿರುವ ಮುಸ್ಲಿಂ ಸೆಮಿನರಿಯ ಗ್ರಂಥಾಲಯವನ್ನು ಅಪವಿತ್ರಗೊಳಿಸಿದ್ದಕ್ಕೆ ಪ್ರತಿಯಾಗಿ ಬುಧವಾರ ಮುಸ್ಲಿಂ ಸಮುದಾಯಕ್ಕೆ ಸೇರಿದ ಗುಂಪು ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಡ್ಡಿಗಾಗಿ ಇಮ್ರಾನ್ ಪರದಾಟ – ಪ್ರಧಾನಿ ನಿವಾಸವನ್ನು ಬಾಡಿಗೆ ನೀಡಲು ಮುಂದಾದ ಪಾಕ್ ಪ್ರಧಾನಿ..!
Attack on Ganesh temple Bhong Sharif Rahim Yar Khan Punjab. Chief Justice is requested to take action, please. pic.twitter.com/LMu90Pxm5r
— Dr. Ramesh Vankwani (@RVankwani) August 4, 2021
SUV ವಾಹನ ಸ್ಪೋಟಿಸಿದ ಮಾವೋವಾದಿಗಳು – ಓರ್ವ ಸಾವು , 11 ಮಂದಿಗೆ ಗಾಯ
ಕಳೆದ ವಾರ ಇದೇ ಭೋಂಗ್ ಪ್ರದೇಶದಲ್ಲಿರುವ ಸೆಮಿನರಿಯ ಗ್ರಂಥಾಲಯದಲ್ಲಿ ಎಂಟು ವರ್ಷದ ಹಿಂದೂ ಬಾಲಕನೊಬ್ಬ ಶೌಚ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಈ ಘಟನೆ ದಶಕಗಳಿಂದ ಹಿಂದೂ ಮತ್ತು ಮುಸ್ಲಿಮರು ಶಾಂತಿ – ಸೌಹಾರ್ದದಿಂದ ನೆಲೆಸಿರುವ ಭೋಂಗ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಕಾರಣವಾಯಿತು.
ಬುಧವಾರ, ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸಂಸದ ಡಾ.ರಮೇಶ್ ಕುಮಾರ್ ವಾಂಕ್ವಾನಿ, ದೇವಾಲಯದ ಮೇಲೆ ದಾಳಿಯ ಮಾಡಿರುವ ದೃಶ್ಯಾವಳಿಗಳನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗದವರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ.