SUV ವಾಹನ ಸ್ಪೋಟಿಸಿದ ಮಾವೋವಾದಿಗಳು – ಓರ್ವ ಸಾವು , 11 ಮಂದಿಗೆ ಗಾಯ
ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮಾವೋವಾದಿಗಳು SUV ವಾಹನವನ್ನ ಸ್ಪೋಟಿಸಿರುವ ಘಟನೆ ಛತ್ತೀಸ್ ಗಢದ ಬಳಿ ನಡೆದಿದ್ದು, ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ..
ಛತ್ತೀಸ್ಗಢದ ಬಂಡಾಯ ಪೀಡಿತ ದಾಂತೇವಾಡ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಬಳಸುತ್ತಿದ್ದ ಮಾವೋವಾದಿಗಳು ಸ್ಪೋರ್ಟ್ಸ್ ಯುಟಿಲಿಟಿ ವಾಹನವನ್ನು ಸ್ಫೋಟಿಸಿದ ಪರಿಣಾಮ ಓರ್ವ ಮೃತಪಟ್ಟು 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ರಾಯಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಮಲೆವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಘೋಟಿಯಾ ಗ್ರಾಮದ ಬಳಿ ಬೆಳಗ್ಗೆ 7.30 ರ ಸುಮಾರಿಗೆ ಈ ಘಟನೆ ನಡೆದಿದೆ, ನಿರ್ಮಾಣ ಹಂತದಲ್ಲಿರುವ ನಾರಾಯಣಪುರದಿಂದ ದಂತೇವಾಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಬಳಿ ಈ ಘಟನೆ ನಡೆದಿರೋದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಪಿಟಿಐಗೆ ತಿಳಿಸಿದ್ದಾರೆ. .
ಭದ್ರತಾ ಪಡೆಗಳನ್ನು ಗುರಿಯಾಗಿಸಿ ಬಂಡುಕೋರರು SUV ಸ್ಪೋಟಿಸಿರಬಹುದೆಂಬ ಶಂಕೆಯನ್ನು ಹೊರಹಾಕಿದ್ದಾರೆ. ಆದರೆ ತಪ್ಪಾಗಿ ನಾಗರಿಕ ವಾಹನದ ಮೇಲೆ ದಾಳಿ ಮಾಡಲಾಗಿದೆ ಎಂದಿದ್ದಾರೆ.. ಆ ಮಾರ್ಗದಲ್ಲಿ ಚಲಿಸುವಾಗ ಪೊಲೀಸರು ಎಂದಿಗೂ ನಾಲ್ಕು ಚಕ್ರದ ವಾಹನವನ್ನು ಬಳಸುವುದಿಲ್ಲ ಎಂದು ಕೂಡ ಅವರು ಹೇಳಿದರು.
ಸಂತ್ರಸ್ತರು ನೆರೆಯ ತೆಲಂಗಾಣಕ್ಕೆ ಹೋಗುತ್ತಿದ್ದರು ಎಂದು ತಿಳಿಸಿರುವ ಅವರು ಬೊಲೆರೊ ವಾಹನವು ಐಇಡಿ ಸ್ಫೋಟದ ಪ್ರಭಾವಕ್ಕೆ ಒಳಗಾಯಿತು, ಒಬ್ಬ ಮಹಿಳೆ ಸೇರಿದಂತೆ ಎಲ್ಲಾ 12 ನಿವಾಸಿಗಳಿಗೆ ಗಾಯವಾಗಿದೆ. ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ, 10 ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ರು.. ಹತ್ತಿರದ ಶಿಬಿರದ ಭದ್ರತಾ ಸಿಬ್ಬಂದಿಯ ತಂಡವು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ..