ನಿಷೇಧಿತ ತೆಹ್ರಿಕ್ – ಇ- ಲಬೈಕ್ ಪಾಕಿಸ್ತಾನ್ ಸಂಘಟನೆಯ 350 ಕಾರ್ಯಕರ್ತರನ್ನ ರಿಲೀಸ್ ಮಾಡಿದ ಉಗ್ರ ರಾಷ್ಟ್ರ ಪಾಕಿಸ್ತಾನ..!
ಉಗ್ರರ ಪೋಷಣೆಯಲ್ಲೇ ಅರ್ಧ ಜೀವನ ಕಳೆದಿರುವ ಪಾಕಿಸ್ತಾನದಲ್ಲಿ ಜನರು ಭಿಕ್ಷುರಾಗ್ತಿದ್ದಾರೆ. ಆದ್ರೆ ಉಗ್ರರಿಗೆ ಮಾತ್ರ ಯಾವುದೇ ಕುಂದು ಕೊರತೆಯಾಗದಂತೆ ಅವರನ್ನ ಸಾಕ್ತಿದೆ ಅಲ್ಲಿನ ಸರ್ಕಾರ. ಇದೀಗ ನಿಷೇಧಿತ ತೆಹ್ರಿಕ್ – ಇ- ಲಬೈಕ್ ಪಾಕಿಸ್ತಾನ್ ಸಂಘಟನೆಯ 350 ಕಾರ್ಯಕರ್ತರನ್ನು ಬಿಡುಗಡೆ ಮಾಡಿದೆ ಎಂದು ಅಲ್ಲಿನ ಆತಂರಿಕ ಸಚಿವ ಶೇಖ್ ರಶೀದ್ ತಿಳಿಸಿದ್ದಾರೆ.
ಇದನ್ನ ತೀವ್ರವಾಗಿ ವಿರೋಧಿಸಿರುವ ವಿಪಕ್ಷಗಳು ಈ ಕ್ರಮವನ್ನು ಟಿಎಲ್ ಪಿಯ ಬೇಡಿಕೆಗಳಿಗೆ ಸಂಪೂರ್ಣ ಶರಣಾಗತಿ ಎಂದು ಬಣ್ಣಿಸಿವೆ. ಇನ್ನೂ ಸಂಘಟನೆಯ ಮುಖ್ಯಸ್ಥ ಸಾದ್ ರಿಜ್ವಿಯನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮುರಿಡ್ಕೆ ಮತ್ತು ಗುಜ್ರಾನ್ ವಾಲಾ ನಡುವಿನ ರಸ್ತೆಯಲ್ಲಿ 10,000 ಕ್ಕೂ ಹೆಚ್ಚು ಇಸ್ಲಾಮಿಕ್ ಕಾರ್ಯಕರ್ತರು ಮೊಕ್ಕಾಂ ಹೂಡಿದ್ದಾರೆ.
ಈ ಗುಂಪು ಇಸ್ಲಾಮಾಬಾದ್‌ಗೆ ಆಗಮಿಸದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರವು ಸಂಘಟನೆಯ 350 ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದೆ. ಒಂದು ವೇಳೆ ಎರಡು ದಿನಗಳೊಳಗೆ ಸಾದ್ ರಿಜ್ವಿಯ ಬಿಡುಗಡೆ ಮತ್ತು ಫ್ರಾನ್ಸ್ ರಾಯಭಾರಿಯನ್ನು ಅಮಾನತುಗೊಳಿಸಬೇಕೆಂಬ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಧರಣಿಯನ್ನು ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.