14 ವರ್ಷದ ಅಪ್ರಾಪ್ತೆಯನ್ನು ಮದುವೆಯಾದ ಪಾಕಿಸ್ತಾನದ ಸಂಸದ..!
ಪಾಕಿಸ್ತಾನದ ಬಲೂಚಿಸ್ತಾನ್ ನ ನ್ಯಾಷನಲ್ ಆಸೆಂಬ್ಲಿ ಪಕ್ಷದ ಸಂಸದ ಮತ್ತು ಉಲೇಮಾ-ಇ- ಇಸ್ಲಾಂ ಮುಖಂಡ ಮೌಲಾನಾ ಸಲಾಹುದ್ದೀನ್ ಅಯುಬಿ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೇ ಪೊಲೀಸರು ಇವರನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಗಮನಿಸಬೇಕಾದ ವಿಚಾರವೇನೆಂದ್ರೆ ಅಯುಬಿ ಅವರ ವಯಸ್ಸು 50 ಮೀರಿದೆ. ಹೀಗಿರುವಾಗ ಮಗಳ ವಯಸ್ಸಿನ ಬಾಲಕಿಯನ್ನ ವಿವಾಹವಾಗಿದ್ದಾರೆ. ಅಲ್ಲದೇ ಒಬ್ಬ ಜನಪ್ರತಿನಿಧಿಯಾಗಿದ್ದುಕೊಂಡು ಇತರರಿಗೆ ಬುದ್ದಿವಾದ ಹೇಳಬೇಕಾದ ಸ್ಥಾನದಲ್ಲಿರುವ ಇವರೇ ಇಂತಹ ಕೆಲಸ ಮಾಡಿರುವುದು ನಾಚಿಕೆಗೇಡಿನ ಸಂಗತಿಯೇ ಆಗಿದೆ.
OMG : ಒಂದು ಪ್ಲೇಟ್ ಬಿರಿಯಾನಿಗೆ 20 ಸಾವಿರ ರೂಪಾಯಿನಾ..!
ಈ ಬಾಲಕಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಶಾಲಾ ದಾಖಲಾತಿ ಪ್ರಕಾರ ಜನ್ಮ ದಿನ ಅಕ್ಟೋಬರ್ 28, 2006 ಆಗಿದೆ. ಪಾಕ್ ಮಾಧ್ಯಮಗಳ ಪ್ರಕಾರ ನ್ಯಾಷನಲ್ ಆಸೆಂಬ್ಲಿ ಸದಸ್ಯ ಮೌಲಾನಾ ಸಲಾಹುದ್ದೀನ್ ಅಯುಬಿ ಅವರ ವಯಸ್ಸು 50ಕ್ಕೂ ಹೆಚ್ಚಾಗಿದೆ. ಈತ 14 ವರ್ಷದ ಬಾಲಕಿಯನ್ನು ವಿವಾಹವಾಗಿ ಇದೀಗ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿದ್ದಾರೆ. ಪಾಕಿಸ್ತಾನದ ಕಾನೂನಿನ ಪ್ರಕಾರ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಅಪ್ರಾಪ್ತರು ವಿವಾಹಕ್ಕೆ ಅರ್ಹರಲ್ಲ. ಕಾನೂನುಬಾಹಿರವೂ ಹೌದು. ಬಲವಂತದಿಂದ ಮದುವೆ ಮಾಡುವ ಪೋಷಕರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಸ್ವಯಂ ಸೇವಾ ಸಂಸ್ಥೆಯೊಂದು ಕೆಲವು ದಿನಗಳ ಹಿಂದೆ ದಾಖಲಿಸಿದ್ದ ದೂರಿನ ಅನ್ವಯ ಪೊಲೀಸರು ಬಾಲಕಿ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆದರೆ, ಆಕೆಯ ತಂದೆ ಮದುವೆ ಆಗಿಲ್ಲ ಎಂದಿದ್ದಾರೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.