ಕಾಶ್ಮೀರದಲ್ಲಿ ಆರ್ಟಿಕಲ್ 370 ಮರುಸ್ಥಾಪಿಸಿದರೇ ಮಾತ್ರವೇ ಭಾರತದ ಜೊತೆಗೆ ಚರ್ಚೆ – ಇಮ್ರಾನ್ ಖಾನ್
ಕಾಶ್ಮೀರದ ಬಗ್ಗೆ ಪದೇ ಪದೇ ಮಾತನಾಡಿ ಭಾರತವನ್ನ ಕೆಣಕದೇ ಇದ್ರೆ ಪಾಕಿಸ್ತಾನಕ್ಕೆ ನಿದ್ದೆ ಬರಲ್ಲ ಅಂತ ಕಾಣುತ್ತೆ.. ಹೀಗಾಗಿಯೇ ಪಾಕಿಸ್ತಾನದ ಪ್ರಧಾನಿಗಳಾದ ಇಮ್ರಾನ್ ಖಾನ್ ಅವರು ಆಗಾಗ ಕಾಶ್ಮೀರದ ವಿಚಾರ ಎತ್ತುತ್ತಾ ಭಾರರತ ಅಷ್ಟೇ ಅಲ್ದೇ ಜಗತ್ತಿನ ಮುಖಭಂಗ ಅನುಭವಿಸುತ್ತಲೇ ಇರುತ್ತೆ.
ಮತ್ತೊಮ್ಮೆ ಆರ್ಟಿಕಲ್ 370 ಬಗ್ಗೆ ಮಾತನಾಡಿರೋ ಇಮ್ರಾನ್ ಕಾನ್ ಜಮ್ಮು ಮತ್ತು ಕಾಶ್ಮೀರದಲ್ಲಿ 2019 ಆಗಸ್ಟ್ 5ರ ಹಿಂದಿನ ಯಥಾ ಸ್ಥಿತಿ ಪುನಃ ಸ್ಥಾಪಿಸಿದರೆ ಭಾರತದೊಂದಿಗೆ ಮಾತುಕತೆ ಪುನರಾರಂಭಿಸಲು ಸಿದ್ಧರಾಗಿದ್ದೇವೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿಯನ್ನು 2019 ಆಗಸ್ಟ್ 5ರಂದು ಭಾರತ ರದ್ದುಗೊಳಿಸಿತ್ತು. ಬಳಿಕ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. ಕಾಶ್ಮೀರದ ಪೂರ್ವ ಸ್ಥಿತಿಯ ಸ್ಥಾನಮಾನವನ್ನು ಪುನಃಸ್ಥಾಪಿಸದೇ ಭಾರತದೊಂದಿಗಿನ ಮಾತುಕತೆಯನ್ನು ಪುನರುಜ್ಜೀವನಗೊಳಿಸಿದರೆ ಅದು ಕಾಶ್ಮೀರದತ್ತ ಬೆನ್ನು ತಿರುಗಿಸಿದಂತೆ ಎಂದು ನೇರ ಪ್ರಶ್ನೋತ್ತರ ಅವಧಿಯಲ್ಲಿ ಇಮ್ರಾನ್ ಖಾನ್ ಹೇಳಿದ್ದಾರೆ. ಅಲ್ಲದೇ ಭಾರತ ಕೈಗೊಂಡಿರುವ ಕ್ರಮವನ್ನು ಹಿಂಪಡೆದರೆ ಖಂಡಿತವಾಗಿಯೂ ಮಾತುಕತೆ ನಡೆಸಲು ಸಿದ್ಧರಾಗಿದ್ದೇವೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಜೂನ್ 15ರವರೆಗೆ ಲಾಕ್ ಡೌನ್ ವಿಸ್ತರಣೆ – ಉದ್ಧವ್ ಠಾಕ್ರೆ
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.