ಅಫ್ಗಾನ್ ವಿಚಾರದಲ್ಲಿ ಅಮೆರಿಕಾಗೆ ಬೆಂಬಲಿಸಿ ತಪ್ಪು ಮಾಡಿದ್ರಂತೆ ಇಮ್ರಾನ್ – ತಾಲಿಬಾನಿಗಳಿಗೆ ಸಪೋರ್ಟ್ ಮಾಡಿದ್ದು ಸರಿನಾ..??
ಪಾಕಿಸ್ತಾನ : ಪಾಕಿಸ್ತಾನ ಎಂತಹ ಮಹಾನ್ ಕಪಟಿ, ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿರುದ್ಧ ಉಗ್ರರನ್ನ ಛೂ ಬಿಡಲು ತಾಲಿಬಾನಿಗಳಿಗೆ ಸಪೋರ್ಟ್ ಮಾಡುತ್ತಿರುವ ವಿಚಾರ ಜಗತ್ತಿಗೆ ಗೊತ್ತಿದೆ. ಇಡೀ ಅಫ್ಗಾನಿಸ್ತಾನದ ಜನ ಇವತ್ತು ತಾಲಿಬಾನಿಗಳ ಕಾಲ್ಕೆಳಗೆ ಸಿಲುಕಿ ಕಣ್ಣೀರಿಡುತ್ತಿರೋದಕ್ಕೆ ಮುಖ್ಯ ಕಾರಣವೇ ಪಾಕಿಸ್ತಾನ. ಪಾಕಿಸ್ತಾನ ತಾಲಿಬಾನಿಗಳಿಗೆ ಪರೋಕ್ಷವಾಗಿ ನೆರವಾಗಿರುವ ವಿಚಾರ , ಕಾಶ್ಮೀರಕ್ಕಾಗಿ ತಾಲಿಬಾನಿಗಳನ್ನ ಛೂಬಿಡುವ ಪಾಕಿಸ್ತಾನದ ರಣಹೇಡಿತನದ ಪ್ಲಾನ್ ಗೊತ್ತಿಲ್ಲದೇ ಏನಿಲ್ಲ.
ಅಷ್ಟೇ ಅಲ್ಲ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸ್ಯಾಡಿಸಮ್ ನಿಂದ ಖುಷಿಯಾಗಿರುವ ಮಾನ್ಯ ಇಮ್ರಾನ್ ಖಾನ್ ಅವರು ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದಾರೆ. ಅದ್ರಲ್ಲಿ ಅಫ್ಗಾನ್ ವಿಚಾರದಲ್ಲಿ ಅಮೆರಿಕಾಗೆ ಸಪೋರ್ಟ್ ಮಾಡಿ ತಪ್ಪು ಮಾಡಿದ್ವಿ. ತಾಲಿಬಾನಿಗಳಿಗೆ ಸಪೋರ್ಟ್ ಮಾಡಬೇಕಿತ್ತು ಅನ್ನೋ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಅಫ್ಗಾನ್ ನಲ್ಲಿ ಎಲ್ಲಾ ಸಮುದಾಯಗಳನ್ನು ಒಳಗೊಂಡ ಸಮ್ಮಿಶ್ರ ಸರ್ಕಾರ ಇರಬೇಕು ಎಂಬುದೇ ತಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.
ಮಹಾನ್ ಸ್ಯಾಡಿಸ್ಟ್ ಗಳು ತಾಲಿಬಾನ್ ಉಗ್ರರು – ಅಫ್ಗಾನ್ ನಲ್ಲಿ ಟಿ20 ಪ್ರಸಾರ ಬ್ಯಾನ್..!
ಇದಕ್ಕಾಗಿ ತಾಲಿಬಾನಿಗಳ ಜೊತೆ ಮಾತುಕತೆ ಆರಂಭಿಸಿದ್ದೇನೆ ಎಂದು ತಿಳಿಸಿದ್ದಾರೆ. ತಜಿಕಿಗಳು, ಹಜಾರಗಳು, ಉಜ್ಬೆಕ್ಗಳಿಗೆ ಸರ್ಕಾರದಲ್ಲಿ ಪಾಲು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಇಮ್ರಾನ್ ಸಾಹೇಬ್ರು ಜನರ ಹಕ್ಕುಗಳನ್ನು ಗೌರವಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ತಾಲಿಬಾನಿಗಳಿಗೆ ಇಮ್ರಾನ್ ಖಾನ್ ಸಲಹೆ ನೀಡಿರೋದಾಗಿ ತಿಳಿಸಿದ್ದಾರೆ.
ಅಲ್ಲದೇ ಅಮೆರಿಕವನ್ನು ಬೆಂಬಲಿಸಿ ದೊಡ್ಡ ತಪ್ಪು ಮಾಡಿದೆವು. ಇದೇ ವೇಳೆ ಒಬ್ಬ ಪಾಕಿಸ್ತಾನಿಯಾಗಿ, ಅಮೆರಿಕ ಸೆನೆಟರ್ ಗಳು ಮಾಡಿದ ಕೆಲವು ಟೀಕೆಗಳಿಂದ ನನಗೆ ತುಂಬಾ ನೋವಾಗಿದೆ. ಅಫ್ಘಾನಿಸ್ತಾನದಲ್ಲಿನ ಈ ಸೋಲಿಗೆ ಪಾಕಿಸ್ತಾನವನ್ನು ದೂಷಿಸುವುದು ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.