ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಒಂದಾದ ಮೇಲೊಂದು ವಿಭಿನ್ನವಾದ ಚಿತ್ರಗಳು ತೆರೆಗಪ್ಪಳಿಸುತ್ತಿವೆ.
ಕಮರ್ಷಿಯಲ್ ಚಿತ್ರಗಳ ಜೊತೆಜೊತೆಗೆ ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಡುವ ಚಿತ್ರಗಳು ಚಂದವನಕ್ಕೆ ಲಗ್ಗೆ ಇಡುತ್ತಿವೆ.
ಅಂತಹದ್ದೇ ಒಂದು ಚಿತ್ರ ಪಾರವ್ವನ ಕನಸು.
ಪಾರವ್ವನ ಕನಸು ಚಿತ್ರದ ಟೀಸರ್ , ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
ಲಿರಿಕಲ್ ವಿಡಿಯೋ ಲಾಂಚ್ ಆಗಿ ಈಗಾಗಲೇ ಅಬ್ಬರಿಸುತ್ತಿದೆ.
ಇನ್ನೂ ಚಿತ್ರದ ಟ್ರೈಲರ್, ಟೀಸರ್, ಫಸ್ಟ್ ಲುಕ್ ನೋಡಿದವರೆಲ್ಲ ಚಿತ್ರ ವಿಭಿನ್ನವಾದ ಕಥೆಹೊಂದಿರಲಿದೆ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ.
ಹಳ್ಳಿಯಲ್ಲಿನ ಒಂದು ಚಿಕ್ಕ ಪರಿವಾರದ ಬದುಕಿನ ಸುತ್ತಲಿದ್ದು, ಇದೊಂದು ಪಕ್ಕಾ ಹಳ್ಳಿ ಸೊಗಡಿನ ಚಿತ್ರವೆಂದೂ ವರ್ಣಿಸಲಾಗುತ್ತಿದೆ.
ಹಳ್ಳಿಯೊಂದರಲ್ಲಿ ಹೀರೋ ತಾಯಿ ಪಾರವ್ವ ತನ್ನ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿರುತ್ತಾಳೆ.
ಹಳ್ಳಿಯಲ್ಲಿ ಒಂದು ಸುಂದರವಾದ ಮನೆ ಕಟ್ಟಿ ಕುಟುಂಬದೊಂದಿಗೆ ಸಂತೋಷವಾಗಿ ಜೀವನ ಸಾಗಿಸುವುದೇ ಪಾರವ್ವನ ಕನಸು.
ಬಳಿಕ ಅನೇಕ ಘಟನೆಗಳ ನಂತರ ಅನಿವಾರ್ಯವಾಗಿ ಪಾರವ್ವ ಕುಟುಂಬ ಹಳ್ಳಿಯಿಂದ ಪಟ್ಟಣಕ್ಕೆ ಬಂದು ಬದುಕುಕಟ್ಟಿಕೊಳ್ಳುವುದು ಹಾಗೂ ಪಾರವ್ವನ ಕನಸು ನನಸಾಗುತ್ತ ಎಲ್ಲವಾ ಎಂಬುದೇ ಚಿತ್ರದ ಕಥೆ.
ಇನ್ನೂ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಲಿದೆ.
ಈ ಚಿತ್ರದಲ್ಲಿ ಆರ್. ಸುರೇಶ್ ಕುಮಾರ್, ರಶ್ಮಿತಾ, ಹರ್ಷಿತಾ, ಅಪೂರ್ವ ಶ್ರೀ, ಅಂಜನಪ್ಪ ಸೇರಿದಂತೆ ಅನೇಕರ ತಾರಾಬಳಗವಿದೆ.
ಚಿತ್ರಕ್ಕೆ ಸಿ. ಮಲ್ಲಿಕಾರ್ಜುನ್ ಅವರು ಆಕ್ಷನ್ ಕಟ್ ಹೇಳಿದ್ರೆ, ಸುರೇಶ್ ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.
ಧೀಮಂತ್ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿ ಮೂಡಿಬರುತ್ತಿರುವ ಸಿನೆಮಾಗೆ ತರುಣ್ ಸೈಮಂಡ್ಸ್ ರ ಸಂಗೀತವಿದೆ.