ಪೋಷಕರೇ ಎಚ್ಚರ : ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ ಕೊರೊನಾ..!

1 min read
Corona

ಪೋಷಕರೇ ಎಚ್ಚರ : ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ ಕೊರೊನಾ..!

ಬೆಂಗಳೂರು : ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ.

ಈ ಮಧ್ಯೆ ಈ ಹೆಮ್ಮಾರಿ ವೈರಲ್ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬ ವರದಿ ಬಹಿರಂಗವಾಗಿದೆ.

ಅಂದ್ರೆ ಕೊರೊನಾ ಎರಡನೇ ಅಲೆಯಲ್ಲಿ ಮಕ್ಕಳೇ ಹೆಚ್ಚಾಗಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ

ನಿನ್ನೆ ಪತ್ತೆಯಾದ ಸೋಂಕಿತರ ಪೈಕಿ 9 ವರ್ಷದೊಳಗಿನ 149 ಮಕ್ಕಳಿಗೆ ಸೋಂಕು ವಕ್ಕರಿಸಿದೆ. 10 ರಿಂದ 19 ವರ್ಷದೊಳಗಿನ 398 ಮಕ್ಕಳಿಗೆ ಸೋಂಕು ತಾಕಿರುವುದು ದೃಢವಾಗಿದೆ.

Corona

ಕಾರಣವೇನು..?
ಮಕ್ಕಳ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು

ಕೊರೊನಾ ವೈರಸ್ ರೂಪಾಂತರಗೊಂಡಿದ್ದೇ ಕಾರಣ

ಶಾಲೆಗೆ, ಶಾಪಿಂಗ್, ಸಮಾರಂಭಗಳಲ್ಲಿ ಮಕ್ಕಳ ಭಾಗಿ

ಇನ್ನು ಅನ್ ಲಾಕ್ ಬಳಿಕ ಮಕ್ಕಳಿಗೆ ಶಾಲೆಗಳು ಕೂಡ ಆರಂಭವಾಗಿದೆ. ಇದಲ್ಲದೆ ಮದುವೆ, ಸಮಾರಂಭ, ಶಾಪಿಂಗ್ ಗಳಿಗೆ ಪೋಷಕರು ತಮ್ಮ ಜೊತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಕೂಡ ಹೆಚ್ಚಾಗಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd