ವಿಮಾನದಲ್ಲಿ ಜನಸಿದ ಮಗುವಿಗೆ ಸಿಗುತ್ತಿಲ್ಲ ಜನನ ಪ್ರಮಾಣ ಪತ್ರ

1 min read
Birth Certificate

ವಿಮಾನದಲ್ಲಿ ಜನಸಿದ ಮಗುವಿಗೆ ಸಿಗುತ್ತಿಲ್ಲ ಜನನ ಪ್ರಮಾಣ ಪತ್ರ

ರಾಜಸ್ಥಾನ : ಮಾರ್ಚ್ 17 ರಂದು ಬೆಂಗಳೂರಿನಿಂದ ಜೈಪುರಕ್ಕೆ ತೆರಳಿದ್ದ ವಿಮಾನದಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದೀಗ ಆ ಮಗುವಿಗೆ ಜನನ ಪ್ರಮಾಣ ಪತ್ರಕ್ಕಾಗಿ ಪೋಷಕರು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾವಾಗಿದೆ.

ಈ ಕುರಿತು ಮಾತನಾಡಿರುವ ಮಗುವಿನ ತಂದೆ ಭೈರೋ ಸಿಂಗ್, ನಾನು ವೈದ್ಯರ ಸಲಹೆ ಪಡೆದುಕೊಂಡು ಅಂದು ಎಂಟು ತಿಂಗಳ ಗರ್ಭಿಣಿ ಹೆಂಡತಿಯೊಂದಿಗೆ ಫ್ಲೈಟ್ 6ಇ -469 ವಿಮಾನದಲ್ಲಿ ಪ್ರಯಾಣಿಸಿದ್ದೆ.

Birth Certificate

ಈ ಮಧ್ಯೆ ಆಕೆಗೆ ಹೆರಿಗೆಯಾಯಿತು. ಆ ದಿನ, ವಿಮಾನಯಾನ ಸಂಸ್ಥೆ ನಮಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿತ್ತು.

ವಿಮಾನ ನಿಲ್ದಾಣಕ್ಕೆ ಇಳಿದ ನಂತರ ನಾವು ಆಸ್ಪತ್ರೆಗೆ ತೆರಳಿದ್ದೆವು. ಆದ್ರೆ ಇದೀಗ ನನ್ನ ಮಗುವಿಗೆ ಜನನ ಪ್ರಮಾಣಪತ್ರ ನೀಡಲು ಯಾವುದೇ ಆಸ್ಪತ್ರೆಯೂ ಒಪ್ಪುತ್ತಿಲ್ಲ ” ಎಂದು ಬೇಸರ ಹೊರಹಾಕಿದ್ದಾರೆ.

belagavi
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd