ಮೊದಲ ಡೋಸ್ ಲಸಿಕೆ ಪಡೆದಿದ್ದ ಪರೇಶ್ ರಾವಲ್ ಗೆ ಕೊರೊನಾ
ನವದೆಹಲಿ : ಮೊದಲ ಕೊರೊನಾ ಡೋಸ್ ಲಸಿಕೆ ಪಡೆದಿದ್ದ ಲೋಕಸಭಾ ಸದಸ್ಯ, ನಟ ಪರೇಶ್ ರಾವಲ್ ಅವರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ.
ಈ ಬಗ್ಗೆ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ದುರಾದೃಷ್ಟವಶಾತ್, ನಾನು ಕೊರೊನಾ ಪರೀಕ್ಷೆಯನ್ನು ಮಾಡಿಕಸಿಕೊಂಡಾಗ ನನಗೆ ಸೋಂಕು ಇರುವುದು ಖಚಿತವಾಗಿದೆ.
ಕಳೆದ 10 ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ದಯವಿಟ್ಟು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ 65 ವರ್ಷದ ಪರೇಶ್ ರಾವಲ್ ಅವರು ಮಾರ್ಚ್ ಒಂಭತ್ತರಂದು ಕೊರೊನಾ ಮೊದಲ ಡೋಸ್ ಲಸಿಕೆ ಪಡೆದಿದ್ದರು.
