ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ನ 47ನೇ ನಾಯಕ ಪ್ಯಾಟ್ ಕಮಿನ್ಸ್… ಉಪನಾಯಕನಾಗಿ ಸ್ಮೀವ್ ಸ್ಮಿತ್

1 min read
Pat Cummins was named the 47th captain of Australia's Test team saakshatv

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ನ 47ನೇ ನಾಯಕ ಪ್ಯಾಟ್ ಕಮಿನ್ಸ್… ಉಪನಾಯಕನಾಗಿ ಸ್ಮೀವ್ ಸ್ಮಿತ್

 Pat Cummins was named the 47th captain of Australia's Test team smith  saakshatvಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ವೇಗಿ ಪ್ಯಾಟ್ ಕಮಿನ್ಸ್ ಅವರು ನೇಮಕಗೊಂಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಟೆಸ್ಟ್ ತಂಡದ 47ನೇ ನಾಯಕನಾಗಿ ಪ್ಯಾಟ್ ಕಮಿನ್ಸ್ ಹೊರಹೊಮ್ಮಿದ್ದಾರೆ.
ಮಹಿಳಾ ಸಿಬ್ಬಂದಿಗೆ ಅಶ್ಲೀಲ ಸಂದೇಶ ರವಾನೆಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಾಯಕತ್ವಕ್ಕೆ ಟೀಮ್ ಪೇನ್ ಅವರು ರಾಜೀನಾಮೆ ನೀಡಿದ್ದರು.
28ರ ಹರೆಯದ ಪ್ಯಾಟ್ ಕಮಿನ್ಸ್ ಅವರು ಐಪಿಎಲ್ ನಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿದ್ದರು.
ಅಂದ ಹಾಗೇ, ಪ್ಯಾಟ್ ಕಮಿನ್ಸ್ ಅವರು ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲೇ ಬೌಲರ್ ಆಗಿ ತಂಡದ ಸಾರಥ್ಯ ವಹಿಸುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ರೇ ಲಿಂಡ್‍ವಾಲ್ ಅವರು ಆಸ್ಟ್ರೇಲಿಯಾ ಪರ ಏಕೈಕ ಟೆಸ್ಟ್ ಪಂದ್ಯಕ್ಕೆ ಸಾರಥಿಯಾಗಿದ್ದರು. ಅದು ಕೂಡ 195ರಲ್ಲಿ. ಅಂದ್ರೆ ಇದೀಗ 71 ವರ್ಷಗಳ ಬಳಿಕ ವೇಗಿಯೊಬ್ಬ ತಂಡದ ಸಾರಥಿ ವಹಿಸುತ್ತಿರುವುದು ಇದೇ ಮೊದಲ ಬಾರಿ.
 Pat Cummins was named the 47th captain of Australia's Test team saakshatvಈಗಾಗಲೇ ಪ್ಯಾಟ್ ಕಮಿನ್ಸ್ ಅವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಉಪನಾಯಕನಾಗಿದ್ದರು. ಇದೀಗ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಅದೇ ರೀತಿ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರು ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಸ್ಟೀವ್ ಸ್ಮಿತ್ ಅವರು ಈ ಹಿಂದೆ ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದರು. ಆದ್ರೆ ಬಾಲ್ ಟ್ಯಾಂಪರಿಂಗ್ ಆರೋಪದಲ್ಲಿ ಸ್ಟೀವ್ ಸ್ಮಿತ್ ನಿಷೇಧ ಅನುಭವಿಸಿದ್ರು. ಜೊತೆಗೆ ನಾಯಕತ್ವವನ್ನು ತ್ಯಜಿಸಿದ್ರು.
ಹಾಗೇ ನೋಡಿದ್ರೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೂರು ಮಾದರಿಯ ನಾಯಕತ್ವಕ್ಕೆ ಸ್ಟೀವ್ ಸ್ಮಿತ್ ಮೊದಲ ಆಯ್ಕೆಯಾಗಿದ್ದರು. ಆದ್ರೆ ಕ್ರಿಕೆಟ್ ಆಸ್ಟ್ರೇಲಿಯಾ ಅಷ್ಟು ಸುಲಭವಾಗಿ ಸ್ಟೀವ್ ಸ್ಮಿತ್ ಅವರನ್ನು ಆಯ್ಕೆ ಮಾಡುವ ಮನಸ್ಸು ಮಾಡುತ್ತಿಲ್ಲ.
ಇನ್ನು ನಾಯಕತ್ವದ ಜವಾಬ್ದಾರಿ ಸಿಕ್ಕಿರುವುದು ಹೆಮ್ಮೆಯನ್ನುಂಟು ಮಾಡಿದೆ. ಈ ಜವಾಬ್ದಾರಿಯನ್ನು ನಿಭಾಯಿಸಲು ನಾನು ಸಿದ್ಧನಿದ್ದೇನೆ. ತಂಡದಲ್ಲಿ ಹಿರಿಯ ಹಾಗೂ ಅನುಭವಿ ಮತ್ತು ಯುವ ಆಟಗಾರರು ಇದ್ದಾರೆ. ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸುವ ವಿಶ್ವಾಸವಿದೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಡಿಸೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಆಶಷ್ ಸರಣಿ ಪ್ಯಾಟ್ ಕಮಿನ್ಸ್ ಅವರಿಗೆ ಅಗ್ನಿಪರೀಕ್ಷೆಯಾಗಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd