1 ಲಕ್ಷ ಸೋಂಕಿತರಿಗೆ ಪತಂಜಲಿಯ ಕೊರೊನಿಲ್ ಔಷಧಿ ಉಚಿತವಾಗಿ ಹಂಚಿದ ಹರಿಯಾಣ ಸರ್ಕಾರ
ನವದೆಹಲಿ: ಹರಿಯಾಣದಲ್ಲಿ 1 ಲಕ್ಷ ಪತಂಜಲಿಯ ಕೊರೊನಿಲ್ ಔಷಧಿ ಕಿಟ್‍ಗಳನ್ನು ಕೊರೊನಾ ಸೋಂಕಿತರಿಗೆ ಉಚಿತವಾಗಿ ಹಂಚಲಾಗಿದೆ.
ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೊರೊನಾ ಸೋಂಕಿತರು ಬೇಗ ಗುಣಮುಖರಾಗಲಿ ಎಂಬ ಉದ್ದೇಶದಿಂದ ಪತಂಜಲಿ ಆಯುರ್ವೇದದ ಕೊರೊನಿಲ್ ಔಷಧಿಯ 1 ಲಕ್ಷ ಕಿಟ್‍ಗಳನ್ನು ಕಿಟ್‍ಗಳನ್ನು ಉಚಿತವಾಗಿ ಹಂಚಲಾಗುತ್ತಿದೆ. ಇದರ ಅರ್ಧದಷ್ಟು ಹಣವನ್ನು ಪತಂಜಲಿ ಭರಿಸಿದೆ, ಉಳಿದ ಅರ್ಧ ಹಣವನ್ನು ಸರ್ಕಾರದ ಕೋವಿಡ್ ರಿಲೀಫ್ ಫಂಡ್‍ನಿಂದ ಭರಿಸಲಾಗಿದೆ ಎಂದು ತಿಳಿಸಿದರು.
ಈ ಕಿಟ್‍ಗಳ ಅರ್ಧದಷ್ಟು ವೆಚ್ಚವನ್ನು ಪತಂಜಲಿ ಹಾಗೂ ಉಳಿದ ಅರ್ಧ ವೆಚ್ಚವನ್ನು ಸರ್ಕಾರದ ‘ಕೋವಿಡ್ ರಿಲೀಫ್ ಫಂಡ್’ ನಿಂದ ಭರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕಿಟ್‍ನಲ್ಲಿ 3 ರೀತಿಯ ಔಷಧಿ ಇದ್ದು, ಕೊರೊನಿಲ್ ಮಾತ್ರೆಗಳು, ಸ್ವಾಸರಿ ವಾತಿ ಹಾಗೂ ಅನು ತೈಲವನ್ನು ಒಳಗೊಂಡಿದೆ. ಬಾಬಾ ರಾಮ್‍ದೇವ್ ಅವರು ಕೊರೊನಾ ಮೊದಲ ಅಲೆ ಪೀಕ್‍ನಲ್ಲಿದ್ದಾಗ ಜೂನ್ 23ರಂದು ಆಯುರ್ವೇದ ಔಷಧಿಯಾದ ಕೊರೊನಿಲ್‍ನ್ನು ಪರಿಚಯಿಸಿದ್ದರು.
ಕೊರೊನಾ ಮಹಾಮಾರಿ :
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








