ಕೊರೊನಿಲ್ ಪ್ರಮಾಣೀಕರಣದ ಬಗ್ಗೆ ಪತಂಜಲಿ ಆಯುರ್ವೇದ ಸಂಸ್ಥೆಯಿಂದ ಸ್ಪಷ್ಟನೆ

1 min read
Coronil

ಕೊರೊನಿಲ್ ಪ್ರಮಾಣೀಕರಣದ ಬಗ್ಗೆ ಪತಂಜಲಿ ಆಯುರ್ವೇದ ಸಂಸ್ಥೆಯಿಂದ ಸ್ಪಷ್ಟನೆ

ಹೊಸದಿಲ್ಲಿ, ಫೆಬ್ರವರಿ23: ದೇಶದಲ್ಲಿ ಕೋವಿಡ್ -19 ಚಿಕಿತ್ಸೆಗಾಗಿ ಪತಂಜಲಿ ಆಯುರ್ವೇದ ಸಂಸ್ಥೆಯ ಕೊರೊನಿಲ್ ಪ್ರಮಾಣೀಕರಣದ ಬಗ್ಗೆಗಿನ ಊಹಾಪೋಹಗಳಿಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

Patanjali issues clarification for Coronil

ಕೊರೊನಿಲ್ ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಜಿಎಂಪಿ ಕಂಪ್ಲೈಂಟ್ ಸಿಒಪಿಪಿ ಪ್ರಮಾಣಪತ್ರವನ್ನು ಭಾರತ ಸರ್ಕಾರದ ಡಿಸಿಜಿಐ ನೀಡಿದೆ ಎಂಬ ಗೊಂದಲವನ್ನು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ. WHO ಯಾವುದೇ ಔಷಧಿಗಳನ್ನು ಅನುಮೋದಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ಜನರಿಗೆ ಉತ್ತಮ, ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು WHO ಕೆಲಸ ಮಾಡುತ್ತದೆ ಎಂದು ಆಚಾರ್ಯ ಬಾಲಕೃಷ್ಣ ಟ್ವೀಟ್ ಮಾಡಿದ್ದಾರೆ.

ಕೋವಿಡ್ -19 ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದ ನಂತರ ಆಚಾರ್ಯ ಬಾಲಕೃಷ್ಣ ಟ್ವೀಟ್ ಮಾಡಿದ್ದಾರೆ.
Coronil

ಈ ಮೊದಲು ಪತಂಜಲಿ ಆಯುರ್ವೇದ ಸಂಸ್ಥೆ ತಯಾರಿಸಿದ ಕೊರೊನಾ ಔಷಧ ಕೊರೊನಿಲ್ ಗೆ ಭಾರತ ಸರ್ಕಾರದಿಂದ ಹಾಗೂ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ದಿಂದ ಅನುಮತಿ ಸಿಕ್ಕಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದರು. ಕೊರೊನಿಲ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚು ಪರಿಣಾಮಕಾರಿಯಾಗಿದ್ದು, ಪತಂಜಲಿ ಸಂಸ್ಥೆಯು ಅದನ್ನು 150 ದೇಶಗಳಿಗೆ ವಿತರಣೆ ಮಾಡಲಿದೆ ಎಂದು ಬಾಬಾ ರಾಮದೇವ್ ಹೇಳಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd