ಇತ್ತೀಚಿನ ದಿನಗಳಲ್ಲಿ ಹೊಸಬರ ಕಿರುಚಿತ್ರಗಳು ದೊಡ್ಡ ಸಿನಿಮಾಗಳಿಗಿಂತ ಯಾವುದೇ ರೀತೀಲು ಕಮ್ಮಿಯಿಲ್ಲವೆಂಬುದನ್ನು ಸಾಬೀತು ಪಡಿಸ್ತಾ ಇವೆ. ತಾಂತ್ರಿಕವಾಗಿ ಹಾಗೂ ವಿಭಿನ್ನ ವಿಷಯಗಳ ತೋರಿಸುವ ಮೂಲಕವೂ ಕಿರುಚಿತ್ರಗಳು ಸಿನಿಪ್ರಿಯರ ಮನ ಗೆಲ್ಲುತ್ತಿವೆ. ಈ ಸಾಲಿಗೆ ‘ PAY PER NEWS’ ಎಂಬ ಮತ್ತೊಂದು ಕಿರುಚಿತ್ರ ಸೇರ್ಪಡೆಯಾಗಿದೆ. ಭಾರ್ಗವ್ ವೆಂಕಟೇಶ್ ಹಾಗೂ ಅನೂಪ್ ಗೌಡ ಅವರು ತಾವೇ ಬಂಡವಾಳ ಹೂಡಿ ತಯಾರಿಸಿರುವ ಕಿರುಚಿತ್ರ ಇದಾಗಿದ್ದು, ಒಂದೇ ರಾತ್ರಿ ನೆಡೆಯೋ ರೋಮಾಂಚಕ ಕಥೆಯನ್ನೊಳಗೊಂಡಿದೆ. ಪ್ರಶಾಂತ್ ಮದ್ದೂರ್ ರವರ ಅದ್ಭುತ ನಟನೆ ನೋಡುಗರಿಗೆ ಇಷ್ಟವಾದರೆ, ನಿತಿನ್ ಅಂಜನಪ್ಪನವರ ಛಾಯಾಗ್ರಹಣಕ್ಕೆ ಫುಲ್ ಮಾರ್ಕ್ಸ್ ನೀಡ್ತಾರೆ ಪ್ರೇಕ್ಷಕರು.

‘ ಆ್ಯಪಲ್ ಪೈನಾಪಲ್ ‘ ಎಂಬ ತಂಡ ಈ ಕಿರುಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಈ ಉತ್ಸಾಹಿ ತಂಡವೂ ಅತೀ ಕಡಿಮೆ ಬಡ್ಜೆಟ್ನಲ್ಲೇ ಈ ಕಿರುಚಿತ್ರ ಪೂರ್ಣಗೊಳಿಸಿದ್ದಾರೆ. ಪ್ರಜ್ವಲ್ ಎನ್ ವಿ ಹಾಗೂ ಕಲೆಕ್ಸ್ ಸ್ಟುಡಿಯೋ ಸಹಕಾರದೊಂದಿಗೆ ಮಲೇಶ್ವರಂ ನ SRV ಚಿತ್ರಮಂದಿರದಲ್ಲಿ ನೆಡೆದ ಕಿರುಚಿತ್ರದ ವಿಶೇಷ ಪ್ರದರ್ಶನದಲ್ಲಿ ಸಲಗ ಚಿತ್ರದ ನಿರ್ಮಾಪಕರಾದ ಶ್ರೀಕಾಂತ್ ಕೆ.ಪಿ, ನಾಗೇಂದ್ರ, ನಿರ್ದೇಶಕ ಲೋಹಿತ್ ಹಾಗೂ ಬಿಗ್ಬಾಸ್ ಖ್ಯಾತಿಯ ನಟ ಒಳ್ಳೆ ಹುಡ್ಗ ಪ್ರಥಮ್ ಭಾಗವಹಿಸಿದ್ದು ವಿಷೇಶ. ಅತೀ ಶೀಘ್ರದಲ್ಲೇ ಕಿರುಚಿತ್ರವನ್ನು ಒಂದು ಹೆಸರಾಂತ Digital platform ನಲ್ಲಿ ಬಿಡುಗಡೆ ಮಾಡುವ ಕಾರ್ಯದಲ್ಲಿ ಈಗ ಚಿತ್ರತಂಡ ನಿರತವಾಗಿದೆ.








