CSK vs PBKS Match | ತಂಡಗಳ ಬಲಾಬಲ.. ಯಾರು ಬಲಿಷ್ಠರು
ಟಾಟಾ ಐಪಿಎಲ್ 2022ರ 38ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. 15 ನೇ ಸೀಸನ್ ನಲ್ಲಿ ಈ ಎರಡೂ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಮೊದಲ ಬಾರಿ ಮುಖಾಮುಖಿಯಾಗಿದ್ದಾಗ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ವಿರುದ್ಧ ಅಮೋಘ ಗೆಲುವು ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ.
ಸದ್ಯದ ವಿಚಾರಕ್ಕೆ ಬಂದರೇ ಮಯಾಂಕ್ ಅಗರ್ ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 9ನೇ ಸ್ಥಾನದಲ್ಲಿದೆ.
ಈ ಸೀಸನ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಏಳು ಪಂದ್ಯಗಳನ್ನಾಡಿದ್ದು, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಚೆನ್ನೈ ತಂಡ ಕೂಡ ಏಳು ಪಂದ್ಯಗಳನ್ನಾಡಿದ್ದು, ಕೇವಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐದು ಪಂದ್ಯಗಳಲ್ಲಿ ಸೋಲು ಕಂಡಿದೆ.
ಪಂಜಾಬ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಮಯಾಂಕ್ ಅಗರ್ ವಾಲ್ 24 ರನ್, ಜಿತೇಶ್ ಶರ್ಮಾ 32 ರನ್ ಗಳಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಿತ್ತು. ಈ ಪಂದ್ಯದಲ್ಲಿ ಚೆನ್ನೈ ತಂಡ ಮೂರು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ರಾಯುಡು 40, ಉತ್ತಪ್ಪ 30 ರನ್ ಗಳಿಸಿದರು.
ಕಳೆದ ಬಾರಿ ಚೆನ್ನೈ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದಾಗ ಪಂಜಾಬ್ ತಂಡ 54 ರನ್ ಗಳಿಂದ ಗೆಲುವು ಸಾಧಿಸಿತ್ತು.
ತಂಡಗಳ ಬಲಾ ಬಲ ವಿಚಾರಕ್ಕೆ ಬಂದರೇ
ಎರಡೂ ತಂಡಗಳಲ್ಲಿಯೂ ಸಮಸ್ಯೆಗಳಿವೆ. ಚೆನ್ನೈ ತಂಡದ ವಿಚಾರಕ್ಕೆ ಬಂದರೆ ಆರಂಭಿಕ ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಶಿವಂ ದುಬೆ, ಧೋನಿ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಆದ್ರೆ ಮತ್ತೊಬ್ಬ ಆರಂಭಿಕ ರುತುರಾಜ್ ಟಚ್ ನಲ್ಲಿ ಕಾಣಿಸ್ತಿಲ್ಲ. ಜಡೇಜಾ, ಬ್ರಾವೋ ಕೂಡ ಬ್ಯಾಟಿಂಗ್ ನಲ್ಲಿ ಮಿಂಚುತ್ತಿಲ್ಲ. ಸ್ಯಾಂಟ್ನರ್ ಕೂಡ ಆಲ್ ರೌಂಡರ್ ಆಟ ಬರ್ತಿಲ್ಲ. ಆದ್ರೆ ಬೌಲಿಂಗ್ ನಲ್ಲಿ ಮುಖೇಶ್ ಚೌದರಿ, ಮಹೀಶ್ ತೀಕ್ಷಣ ಒಳ್ಳೆ ಫಾರ್ಮ್ ನಲ್ಲಿದ್ದಾರೆ. ಇವರಿಗೆ ಡ್ವೇನ್ ಪಿಟೋರಿಯನ್ಸ್ , ಬ್ರಾವೋ ಸಾಥ್ ನೀಡಬೇಕಿದೆ.
ಇತ್ತ ಪಂಜಾಬ್ ವಿಚಾರಕ್ಕೆ ಬಂದರೇ ಬ್ಯಾಟಿಂಗ್ ನಲ್ಲಿ ಸಮಸ್ಯೆಗಳು ಎದ್ದು ಕಾಣುತ್ತಿವೆ. ಮುಖ್ಯವಾಗಿ ನಾಯಕ ಮಯಾಂಕ್ ಅಗರ್ ವಾಲ್ ಬ್ಯಾಡ್ ಫಾರ್ಮ್ ತಂಡಕ್ಕೆ ಮೈನಸ್ ಪಾಯಿಂಟ್ ಆಗಿದೆ. ಜೊತೆಗೆ ಜಾನಿ ಬೈರ್ ಸ್ಟೋ ವೈಫಲ್ಯ, ಲಿಯಾಮ್, ಶಾರೂಕ್ ಖಾನ್ ಅಸ್ಥಿರ ಪ್ರದರ್ಶನ ತಂಡದ ಹಿನ್ನಡೆ ಕಾರಣವಾಗುತ್ತಿದೆ. ಕೇವಲ ಶಿಖರ್ ಧವನ್, ಜೀತೇಶ್ ಶರ್ಮಾ ಬ್ಯಾಟಿಂಗ್ ಮೇಲೆ ತಂಡದ ಗೆಲುವು ನಿಂತಿದೆ. ಬೌಲಿಂಗ್ ನಲ್ಲಿ ಕಗಿಸೋ ರಬಾಡ, ರಾಹುಲ್ ಚಹಾರ್, ಅರ್ಷದೀಪ್ ಸಿಂಗ್, ವೈಭವ್ ಅರೋರಾ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ.