PBKS vs SRH Match | ಸನ್ ರೈಡರ್ಸ್ ತಂಡದಲ್ಲಿ ಯಾರು ಇನ್ ಯಾರು ಔಟ್..?
ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ತನ್ನ ಈ ಸೀಸನ್ ನ 14ನೇ ಪಂದ್ಯವನ್ನಾಡಲಿದೆ. ಇದು ಸನ್ ರೈಸರ್ಸ್ ತಂಡಕ್ಕೆ ಬೆಂಚ್ ಸ್ಟ್ರೆಂಥ್ ಪರೀಕ್ಷಿಸುವ ಪಂದ್ಯವಾಗಿದೆ.
ಯಾಕಂದರೇ 15ನೇ ಸೀಸನ್ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ಸ್ ಗೆ ತಲುಪಿವೆ. ಹೀಗಾಗಿ ಇಂದಿನ ಪಂದ್ಯ ಯಾವುದೇ ಮಹತ್ವ ಪಡೆದುಕೊಂಡಿಲ್ಲ.
ಇದು ಇಂಡಿಯನ್ ಪ್ರಿಮಿಯರ್ ಲೀಗ್ ಹಂತದ ಕೊನೆಯ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ.
ಸತತ ಸೋಲುಗಳ ಬಳಿಕ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಮೂರು ರನ್ ಗಳಿಂದ ಜಯ ಸಾಧಿಸಿದೆ. ಅದೇ ಪ್ರದರ್ಶನವನ್ನು ಮುಂದುವರೆಸಿ ಗೆಲುವಿನೊಂದಿಗೆ ಟೂರ್ನಿಗೆ ಬೈ ಬೈ ಹೇಳಲು ಹೈದರಾಬಾದ್ ಪ್ಲಾನ್ ಮಾಡಿಕೊಂಡಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಈ ಬಾರಿ ಬ್ಯಾಟಿಂಗ್ ಸಮಸ್ಯೆ ಕಾಡುತ್ತಿದೆ. ಕೇನ್ ವಿಲಿಯಂ ಸನ್ ಬ್ಯಾಟಿಂಗ್ ವೈಫಲ್ಯ ತಂಡ ಮೇಲೆ ಪರಿಣಾಮ ಬೀರಿತ್ತು. ಕಳೆದ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆ ಆಗಿದೆ. ಕೇನ್ ತವರಿಗೆ ವಾಪಸ್ ಆಗಿದ್ದು, ಆಡುವ ಹನ್ನೊಂದರ ಬಳಗಕ್ಕೆ ಗ್ಲೆನ್ ಪಿಲಿಪ್ಸ್, ಪ್ರಿಯಂ ಗಾರ್ಗ್ ಬಂದಿರೋದು ಬ್ಯಾಟಿಂಗ್ ಶಕ್ತಿ ಹೆಚ್ಚಿಸಿದೆ.
ಅಂದಹಾಗೆ ಸನ್ ರೈಸರ್ಸ್ ತಂಡದ ಗೆಲುವು ನಿರ್ಧಾರವಾಗೋದೆ ಬೌಲರ್ ಗಳ ಪ್ರದರ್ಶನದ ಮೇಲೆ, ಆದ್ರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಹೈದರಾಬಾದ್ ಬೌಲರ್ ಗಳು ಕಳಫೆ ಪ್ರದರ್ಶನ ನೀಡುತ್ತಿದ್ದಾರೆ. ಮುಖ್ಯವಾಗಿ ಅನಾನುಭವಿ ಬೌಲಿಂಗ್ ಅಟ್ಯಾಕ್ ಹೈದರಾಬಾದ್ ತಂಡಕ್ಕೆ ಮುಳುವಾಗುತ್ತಿದೆ. ಭುವನೇಶ್ವರ್, ಟಿ.ನಟರಾಜನ್, ಉಮ್ರಾನ್ ಮಲಿಕ್ ವಿಕೆಟ್ ಪಡೆಯುತ್ತಿದ್ದರೂ ರನ್ ಗಳಿಗೆ ಕಡಿವಾಣ ಹಾಕುತ್ತಿಲ್ಲ.
ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದರೇ ಹೈದರಾಬಾದ್ ತಂಡದ ಬ್ಯಾಟಿಂಗ್ ಡಿಸೇಂಟ್ ಆಗಿದೆ. ರಾಹುಲ್ ತ್ರಿಪಾಟಿ, ಅಭಿಷೇಕ್ ಶರ್ಮಾ, ಮಾರ್ಕ್ರಾಂ, ನಿಕೋಲಸ್ ಪೂರನ್ ತಂಡಕ್ಕೆ ನೆರವಾಗುತ್ತಿದ್ದಾರೆ. ಪ್ರಿಯಂ ಗಾರ್ಗ್, ಗ್ಲೆನ್ ಪಿಲಿಪ್ಸ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ವಾಷಿಂಗ್ ಟನ್ ಸುಂದರ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿರುವುದು ಬ್ಯಾಟಿಂಗ್ ವಿಭಾಗದ ಜೊತೆಗೆ ಬೌಲಿಂಗ್ ಕೂಡ ತಾಕತ್ತು ಪಡೆದುಕೊಳ್ಳಲಿದೆ.
ತಂಡದ ಪ್ಲೇಯಿಂಗ್ ಇಲೆವೆನ್ ನೋಡೋದಾದ್ರೆ
ಅಭಿಷೇಕ್ ಶರ್ಮಾ
ಪ್ರಿಯಂ ಗಾರ್ಗ್
ರಾಹುಲ್ ತ್ರಿಪಾಟಿ
ಗ್ಲೆನ್ ಪಿಲಿಪ್ಸ್
ಐಡನ್ ಮಾರ್ಕ್ರಂ
ನಿಕೋಲಸ್ ಪೂರನ್
ವಾಷಿಂಗ್ ಟನ್ ಸುಂದರ್
ಫರೂಕ್
ಭುವನೇಶ್ವರ್ ಕುಮಾರ್
ಟಿ ನಟರಾಜನ್
ಉಮ್ರಾನ್ ಮಲ್ಲಿಕ್
pbks-vs-srh-match- Sunrisers Hyderabad Probable Playing XIs