ಪಂಜಾಬ್ ಕಿಂಗ್ಸ್ ತಂಡ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಚೆಪಾಕ್ ಅಂಗಳದಲ್ಲಿ 200 ಪ್ಲಸ್ ರನ್ ಚೇಸ್ ಮಾಡಿ ಇತಿಹಾಸ ಸೃಷ್ಟಿಸಿದೆ ಜತೆಗೆ ಮೊದಲ ತಂಡವೆಂಬ ಗೌರವಕ್ಕೆ ಪಾತ್ರವಾಗಿದೆ. ಅಂಕಪಟ್ಟಿಯಲ್ಲಿ ಪಂಜಾಬ್ ಐದನೆ ಸ್ಥಾನಕ್ಕೇರಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್ಗಳಲ್ಲಿ 200 ರನ್ ಗಳಿಸಿತು. ಪಂಜಾಬ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಕಲೆ ಹಾಕಿತು. 201 ರನ್ ಚೇಸ್ ಮಾಡಿದ ಪಂಜಾಬ್ಗೆ ಕೊನೆಯ ಓವರ್ನಲ್ಲಿ 9 ರನ್ ಬೇಕಿತ್ತು. ಕೊನೆಯ ಓವರ್ ಬೌಲ್ ಮಾಡಿದ ಮಥೀಶಾ ಪಾಥಿರಾನಾ ಮೊದಲ ಮೂರು ಎಸೆತಗಳಲ್ಲಿ ಎರಡು ರನ್ ಕೊಟ್ಟರು. ಸ್ಟ್ರೈಕ್ನಲ್ಲಿದ್ದ ಸಿಕಂದರ್ ರಾಜ ಒತ್ತಡವನ್ನು ನಿಭಾಯಿಸಿ ಎರಡು ಎಸೆತಗಳಲ್ಲಿ ತಲಾ 2 ರನ್ ಹೊಡೆದರು. ಕೊನೆಯ ಎಸೆತದಲ್ಲಿ 3 ರನ್ ಬೇಕಿದ್ದಾಗ ರಾಜ ಬೌಂಡರಿಯತ್ತ ಹೊಡೆದರು. ಮಹೀಶ್ ತೀಕ್ಷ್ಣ ತಡೆದರು ಅಷ್ಟರಲ್ಲಿ ಪಂಜಾಬ್ ಬ್ಯಾಟರ್ಗಳು ಮೂರು ರನ ಓಡಿದ್ದರು.
ಪಂಜಾಬ್ ತಂಡ ಒಂದು ಹಂತದಲ್ಲಿ 186 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಶಿಖರ್ ಧವನ್ 28ರನ್,ಪ್ರಭಾಸಿಮ್ರಾನ್ ಹಾಗು ಅಥರ್ವ ಥೈಡ್ 44 ರನ್ ಸೇರಿಸಿದರು. ಪ್ರಭಾಸಿಮ್ರಾನ್ ಸಿಂಗ್ (42ರನ್), ಲಿಯಾಮ್ ಲಿವೀಂಗ್ಸ್ಟೋನ್ (40ರನ್), ಸ್ಯಾಮ್ ಕರ್ರನ್ (29 ನರ್) ಮತ್ತು ಜಿತೇಶ್ ಶರ್ಮಾ (21ರನ್) ಹೊಡೆದರು. ಬೃಹತ್ ಮೊತ್ತ ಬೆನ್ನತ್ತಿದ ಪಂಜಾಬ್ ಮಧ್ಯಮ ಓವರ್ಗಳಲ್ಲಿ ಕಠಿಣ ಸವಾಲು ಎದುರಿಸಿತು. ನಂತರ ಲಿವಿಂಗ್ ಸ್ಟೋನ್ ಮತ್ತು ಕರ್ರನ್ 57 ರನ್ ಜತೆಯಾಟ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಚೆನ್ನೈ ವೇಗಿ ತುಷಾರ್ ದೇಶಪಾಂಡೆ ತಮ್ಮ 16ನೇ ಓವರ್ನಲ್ಲಿ 24 ರನ್ ನೀಡಿದರು.
ಚೆನ್ನೈ ಪರ ತುಷಾರ್ ದೇಶಪಾಂಡೆ 49ಕ್ಕೆ 3 ವಿಕೆಟ್ ರವೀಂದ್ರ ಜಡೇಜಾ 32ಕ್ಕೆ 2 ವಿಕೆಟ್ ಪಡೆದರು. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಪರ ಒಪನರ್ ಡೆವೊನ್ ಕಾನ್ವೆ 52 ಎಸೆತ, 16 ಬೌಂಡರಿ, 1 ಸಿಕ್ಸರ್, ಅಜೇಯ 92ರನ್ ಹೊಡೆದರು. ಧೋನಿ (ಅಜೇಯ 13ರನ್)ಕೊನೆಯ ಎರಡು ಎಸೆತಗಳನ್ನು ಸಿಕ್ಸರ್ ಅಟ್ಟಿ ಅಭಿಮಾನಿಗಳನ್ನು ರಂಜಿಸಿದರು. ಋತುರಾಜ್ ಗಾಯಕ್ವಾಡ್ 37 ರನ್, ಶಿವಂ ದುಬೆ 28, ಮೊಯಿನ್ ಅಲಿ 10, ರವೀಂದರ ಜಡೇಜಾ 12 ರನ್ ಹೊಡೆದರು. ಡೆವೊನ ಕಾನ್ವೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.








