ಕಡಿಮೆ ಬೆಲೆಗೆ ಬ್ಲೂಟೂತ್ ಸೌಲಭ್ಯವಿರುವ Pebble Spark ಸ್ಮಾರ್ಟ್ ವಾಚ್ ಬಿಡುಗಡೆ…
Pebble ಕಂಪನಿ ಅತಿ ಕಡಿಮೆ ಬೆಲೆಗೆ ಬ್ಲೂಟೂತ್ ಕರೆ ಸೌಲಭ್ಯವಿರುವ ತನ್ನ ಹೊಸ ಸ್ಮಾರ್ಟ್ ವಾಚ್ Pebble Spark ಅನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಐದು ದಿನಗಳ ಬ್ಯಾಕಪ್ ಕೊಡುವುದಾಗಿ Pebble ಹೇಳಿದೆ. ಪೆಬಲ್ ಸ್ಪಾರ್ಕ್ ವಾಚ್ ನ ಮಾರಾಟ ಫ್ಲಿಪ್‌ಕಾರ್ಟ್‌ನಿಂದ ಪ್ರತ್ಯೇಕವಾಗಿ ಪ್ರಾರಂಭವಾಗಿದ್ದು, ಇದರ ಬೆಲೆ 1,999 ರೂ.
ಪೆಬಲ್ ಸ್ಪಾರ್ಕ್ ಸ್ಮಾರ್ಟ್ ವಾಚ್ ಅನ್ನು ಬ್ಲಾಕ್ ಬ್ಲೂ, ಚಾರ್ಕೋಲ್ ಮತ್ತು ಡೀಪ್ ವೈನ್ ಬಣ್ಣಗಳಲ್ಲಿ ದೊರಕುತ್ತದೆ. 240×280 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.7-ಇಂಚಿನ ಪೂರ್ಣ HD ಡಿಸ್ಪ್ಲೇಯನ್ನು ಹೊಂದಿದೆ. ಫೈಂಡ್ ಫೋನ್ ಮತ್ತು ವಾಯ್ಸ್ ಅಸಿಸ್ಟೆಂಟ್ ಫೀಚರ್ಸ್ ಗಳೊಂದಿಗೆ ಪೆಬ್ಬಲ್ ಸ್ಪಾರ್ಕ್ ಬರುತ್ತಿದೆ.
ಕಂಪನಿಯ ತಿಳಿಸಿರುವ ಮಾಹಿತಿಯ ಪ್ರಕಾರ Pebble Spark 45 ಗ್ರಾಂ ತೂಕವಿದೆ. ಕರೆ ಸೌಲಭ್ಯಕ್ಕಾಗಿ ಇನ್ ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಹೊಂದಿದೆ. ಪೆಬ್ಬಲ್ ನ ಈ ವಾಚ್ ಸೈಕ್ಲಿಂಗ್, ಓಟ, ಟೆನಿಸ್ ಸೇರಿದಂತೆ ಹಲವಾರು ಸ್ಪೋರ್ಟ್ ಮೋಡ್ ಗಳನ್ನ ಹೊಂದಿದೆ. ಪೆಬಲ್ ಸ್ಪಾರ್ಕ್ 180mAh ಬ್ಯಾಟರಿ ಹೊಂದಿದ್ದು, ಐದು ದಿನಗಳ ಬ್ಯಾಕಪ್, 15 ದಿನಗಳ ಸ್ಟ್ಯಾಂಡ್‌ಬೈ ನೀಡುವುದಾಗಿ ಕಂಪನಿ ಹೇಳಿದೆ.