ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ 7 ವಾಹನಗಳ ಮೇಲೆ ಹರಿದ ಟ್ರಕ್‌ – ಓರ್ವ ಪಾದಾಚಾರಿ ಸಾವು , ಐವರಿಗೆ ಗಾಯ

1 min read

ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ 7 ವಾಹನಗಳ ಮೇಲೆ ಹರಿದ ಟ್ರಕ್‌ – ಓರ್ವ ಪಾದಾಚಾರಿ ಸಾವು , ಐವರಿಗೆ ಗಾಯ

ಅತಿ ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಒಂದು ನಿಯಂತ್ರಣ ತಪ್ಪಿ 7 ವಾಹನಗಳಿಗೆ ಗುದ್ದಿ ಬಳಿಕ ರಸ್ತೆಗೆ ಅಡ್ಡಲಾಗಿ ನಿಂತ ಘಟನೆ ನವಾಲೆ ಬ್ರಿಡ್ಜ್‌ ನ ಬಳಿಯಿರುವ  ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಮುಂಬೈ-ಬೆಂಗಳೂರು ಬೈಪಾಸ್‌ ರಸ್ತೆಯಲ್ಲಿ ಕಟ್ರಾಜ್‌ ಕಡೆಯಿಂದ ವೇಗವಾಗಿ ಆಗಮಿಸುತ್ತಿದ್ದ ಟ್ರಕ್  ನವಾಲೆ ಬ್ರಿಡ್ಜ್‌ ಬಳಿ ನಿಯಂತ್ರಣ ಕಳೆದುಕೊಂಡು 4 ಕಾರುಗಳು ಮತ್ತು 3 ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಈ ಸಂಬಂಧ ಸಿನ್ನಾಗಢ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಟ್ರಕ್‌ ಗುದ್ದಿದ ರಭಸಕ್ಕೆ 7 ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲದೇ ಘಟನೆವೇಲೆ ಟ್ರಕ್‌ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಕೆಲಕಾಲ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು ಎನ್ನಲಾಗಿದೆ.

ಐಒಸಿಎಲ್ – ಎಂಜಿನಿಯರುಗಳು/ಅಧಿಕಾರಿಗಳು ಮತ್ತು ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆಗೆ 1 ಲಕ್ಷದವರೆಗೂ ದಂಡ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd