ಹುಬ್ಬಳ್ಳಿ : ಪಾಪಿಯೊಬ್ಬ ತನ್ನ ತೃಷೆಗಾಗಿ ಅಪ್ರಾಪ್ತ ಬಾಲಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ವಿಡಿಯೋ ಮಾಡಿಕೊಂಡು ಬ್ಲಾಕ್ ಮಾಡುತ್ತಿದ್ದ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ.
ಈತ ಪ್ರತಿಷ್ಠಿತ ಹೋಟೆಲ್ ನಲ್ಲಿ ಅಡುಗೆ ಮಾಡುತ್ತಿದ್ದ. ಸದ್ಯ ಆತನನ್ನು ಥಳಿಸಿರುವ ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಸಿದ್ಧಲಿಂಗೇಶ್ವರ ಕಾಲೋನಿಯಲ್ಲಿ ವಾಸವಿದ್ದ ಒಡಿಶಾ ಮೂಲದ ಕುಕ್, ಪ್ರತಿಷ್ಠಿತ ಹೋಟೆಲೊಂದರಲ್ಲಿ (Hotel) ಕೆಲಸ ಮಾಡುತ್ತಿದ್ದ. ಸಲಿಂಗಕಾಮಿಯಾಗಿದ್ದ ಈತ ಅಪ್ರಾಪ್ತ ಮಕ್ಕಳಿಗೆ ಹಣ ಮತ್ತು ಚಾಕ್ಲೇಟ್ ಆಸೆ ತೋರಿಸಿ ಲೈಂಗಿಕ ಕ್ರಿಯೆ ನಡೆಸಿ, ವಿಡಿಯೋ ಮಾಡುತ್ತಿದ್ದ. ನಂತರ ವಿಡಿಯೋ ಮುಂದಿಟ್ಟುಕೊಂಡು ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಈತನ ಕಾರ್ಯವೈಖರಿಯ ಬಗ್ಗೆ ಅನುಮಾನಗೊಂಡ ಸ್ಥಳೀಯರು ಮನೆಗೆ ತೆರಳಿ, ಆತನ ಮೊಬೈಲ್ ಕಸಿದುಕೊಂಡು ನೋಡಿದಾಗ ಆತನ ಮುಖವಾಡ ಬಯಲಿಗೆ ಬಂದಿದೆ. ಕೂಡಲೇ ಆತನನ್ನು ಥಳಿಸಿ, ಮೊಬೈಲ್ ಕಸಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಣಸಿಗನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.