ವೈಎಸ್ ಆರ್ ಕುಟುಂಬದಲ್ಲಿ ಬಿರುಕು : ಮಹತ್ವದ ಸಭೆಗೆ ಜಗನ್ ಗೈರಾಗಿದ್ದೇಕೆ..?
ಹೈದರಾಬಾದ್ : ಆಂಧ್ರ ಪ್ರದೇಶದ ಮಾಜಿ ಸಿಎಂ ವೈ.ಎಸ್.ರಾಜಶೇಖರ್ ರೆಡ್ಡಿ ಕುಟುಂಬದಲ್ಲಿ ಬಿರುಕು ಮೂಡಿದ್ಯಾ..?
ವೈ ಎಸ್ ಆರ್ ಸ್ಮರಣಾರ್ಥ ಏರ್ಪಡಿಸಿದ್ದ ಸಭೆಗೆ ಜಗನ್ ಗೈರಾಗಿದ್ದೇಕೆ..?
ತೆಲಂಗಾಣ ರಾಜಕೀಯಕ್ಕೆ ವೈ.ಎಸ್.ಶರ್ಮಿಳಾ ಎಂಟ್ರಿ ಕೊಟ್ಟಿದ್ದೇ ಈ ಬಿರುಕಿಗೆ ಕಾರಣವಾಗಿದ್ಯಾ..? ಸದ್ಯ ಆಂಧ್ರ ಪ್ರದೇಶದ ರಾಜಕೀಯ ಪಂಡಿತರಲ್ಲಿ ಮೂಡುತ್ತಿರುವ ಪ್ರಶ್ನೆಗಳಿವು.
ಇದಕ್ಕೆ ಕಾರಣ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ನಡುವಳಿಕೆ.
ಹೌದು..! ಜಗನ್ ತಮ್ಮ ತಂದೆಯ ವರ್ಚಸ್ಸು ಮತ್ತು ಸ್ವಂತ ಶ್ರಮದೊಂದಿಗೆ ಆಂಧ್ರದಲ್ಲಿ ಗದ್ದುಗೆ ಹಿಡಿದಿದ್ದಾರೆ.
ಆದ್ರೆ ವೈ.ಎಸ್.ರಾಜಶೇಖರ ರೆಡ್ಡಿ ಅವರ ಸ್ಮರಣಾರ್ಥ, ಅವರ ಪತ್ನಿ ವೈ.ಎಸ್.ವಿಜಯಮ್ಮ ಅವರು ಏರ್ಪಡಿಸಿದ್ದ ಸಭೆಗೆ ಜಗನ್‍ಮೋಹನ್ ರೆಡ್ಡಿ ಗೈರಾಗಿದ್ದಾರೆ.
ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜಕೀಯ ವಿಶ್ಲೇಷಕರು ವೈಎಸ್‍ಆರ್ ಕುಟುಂಬದಲ್ಲಿ ಬಿರುಕು ಮೂಡಿರಬಹುದು ಎಂದು ಸಂಶಯ ಪಟ್ಟಿದ್ದಾರೆ.
ಇದಕ್ಕೆ ಕಾರಣ ಜಗನ್ ಅವರ ಸಹೋದರಿ ವೈ.ಎಸ್.ಶರ್ಮಿಳಾ ಅವರು ತೆಲಂಗಾಣ ರಾಜಕೀಯಕ್ಕೆ ಧುಮುಕಿರೋದೆ ಎಂದು ಹೇಳಲಾಗುತ್ತಿದೆ.
ಜಗನ್ ಅವರು ತನ್ನ ರಾಜಕೀಯ ಚಟುವಟಿಕೆಯನ್ನು ಆಂಧ್ರ ಪ್ರದೇಶಕ್ಕೆ ಸೀಮಿತಗೊಳಿಸಿಕೊಂಡಿದ್ದಾರೆ. ಆದ್ರೆ ಅವರ ಸಹೋದರಿ ಶರ್ಮಿಳಾ ಸಹೋದರನ ಅಸಮ್ಮತಿಯ ಹೊರತಾಗಿಯೂ ತೆಲಂಗಾಣ ರಾಜಕೀಯ ಪ್ರವೇಶಿಸಿದ್ದಾರೆ. ಇದು ಜಗನ್ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.