ಪೆಟ್ರೋಲ್-ಡಿಸೇಲ್ ದರ 40 ಪೈಸ ಏರಿಕೆ
ನವದೆಹಲಿ: ಸತತ 14 ನೇ ದಿನವು ಪೆಟ್ರೋಲ್-ಡಿಸೇಲ್ ದರ ಏರಿಕೆಯಾಗಿದ್ದು, ಸೋಮವಾರ ಪೆಟ್ರೋಲ್-ಡಿಸೇಲ್ ದರ 40 ಪೈಸೆಯಷ್ಟು ಏರಿಕೆಯಾಗಿದೆ.
ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡಡೆಯುತ್ತಿದ್ದು, ಈ ಸಂಬಂಧ ಕಚ್ಚಾ ತೈಲ ದರ ಏರಿಕೆಯಾಗಿದೆ. ಈ ಕಾರಣದಿಂದ ಪೆಟ್ರೋಲ್-ಡಿಸೇಲ್ ದರ ಏರಿಕೆಯಾಗುತ್ತಿದೆ. ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 109.41 ರೂ. ಮತ್ತು ಡೀಸೆಲ್ ದರ 93.23 ರೂ.ಗೆ ತಲುಪಿದೆ.
ಇನ್ನೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 103.81 ರೂ ಮತ್ತು ಡೀಸೆಲ್ 95.07 ರೂ.ಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 118.83 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 103.07 ರೂ.ಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 109.34 ರೂ. ಹಾಗೂ ಡೀಸೆಲ್ ಲೀಟರ್‌ಗೆ 99.42 ರೂ.
ಸ್ಥಳೀಯ ಮಾರಾಟ ತೆರಿಗೆ ಮತ್ತು ಸಾಗಣೆ ವೆಚ್ಚಕ್ಕೆ ಅನುಗುಣವಾಗಿ ಮಾರಾಟ ದರವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ








