ಜೇಬಿನಲ್ಲಿರುವ ಪುಡಿಗಾಸಿಗೂ ಕತ್ತರಿ : ಸತತ ನಾಲ್ಕನೇ ದಿನವೂ ತೈಲ ಬೆಲೆ ಏರಿಕೆ
ಮುಂಬೈ : ಕೊರೊನಾ ಕಾಟದಿಂದ ಜನರು ಸಂಕಷ್ಟದಲ್ಲಿದ್ದಾರೆ. ಕೊರೊನಾ ಕಂಟ್ರೋಲ್ ಗೆ ರಾಜ್ಯ ಸರ್ಕಾರಗಳು ವಿಧಿಸಿರುವ ಕಫ್ರ್ಯೂನಿಂದಾಗಿ ಜನರ ಆರ್ಥಿಕ ಮೂಲವೇ ಮುಚ್ಚಿ ಹೋಗಿದೆ.
ಹೀಗಿದ್ದರೂ ಕೂಡ ಗಾಯದ ಮೇಲೆ ಬರೆ ಎಳೆದಂತೆ ಪ್ರತಿದಿನ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಆಗುತ್ತಲೇ ಇದೆ. ಸತತ ಮೂರು ದಿನಗಳಂತೆ ಇಂದೂ ದೇಶದಲ್ಲಿ ತೈಲ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿನಲ್ಲಿರುವ ಪುಡಿಗಾಸಿಗೂ ಕತ್ತರಿ ಬೀಳುತ್ತಿದೆ.
ಇವತ್ತು ಪ್ರತಿ ಲೀಟರ್ ಪೆಟ್ರೋಲ್ 25 ರಿಂದ 30 ಪೈಸೆ. ಡೀಸೆಲ್ 30 ರಿಂದ 33 ಪೈಸೆ ಏರಿಕೆ ಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್._91.27. ಡಿಸೇಲ್ ಬೆಲೆ 81.73 ಆಗಿದೆ. ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 94.30. ಡಿಸೇಲ್ ಬೆಲೆ 86.64 ಆಗಿದೆ.
ನಿನ್ನೆ ಪೆಟ್ರೋಲ್ 18 ಪೈಸೆ.ಡೀಸಲ್ 31 ಪೈಸೆ ಏರಿಕೆ ಯಾಗಿತ್ತು. ಈಗಾಗಲೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆರಿವೆ. ಕೊರೊನಾದಿಂದ ಜನರ ಜೀವನ ಭಾರಿ ದುಸ್ತರವಾಗುತ್ತಿದೆ. ಇದೀಗ ತೈಲೆ ಏರಿಕೆ ಆಗುತ್ತಿರುವುದು ಜನರನ್ನ ಉಸಿರಾಡೋಕೆ ಆಗದಂತೆ ಮಾಡುತ್ತಿದೆ.