Petrol & Diesel : ಕಚ್ಚಾ ತೈಲ ದರ ಇಳಿಕೆ – ಇಂಧನ ದರ 14 ರೂ ಕಡಿತ?
ಉಕ್ರೇನ್-ರಷ್ಯಾ ಯುದ್ಧದ ನಡುವೆ ಜಾಗತಿಕವಾಗಿ ಹಣದುಬ್ಬರ ಭಾರೀ ಅಧಿಕವಾಗಿದ್ದು, ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ 120 ಡಾಲರ್ ಅನ್ನು ದಾಟಿದೆ. ಆದರೆ ಇತ್ತೀಚೆಗೆ ಕಚ್ಚಾತೈಲ ದರ ಇಳಿಕೆಯಾಗಿರುವ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ದರವು ಪ್ರತಿ ಲೀಟರ್ಗೆ ಸುಮಾರು 14 ರೂಪಾಯಿ ಇಳಿಕೆಯಾಗುವ ಸಾಧ್ಯತೆಯಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾಗಿದ್ದರೂ ಭಾರತದಲ್ಲಿ ಮಾತ್ರ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
2014 ಅಕ್ಟೋಬರ್ ವರೆಗೂ ಸರ್ಕಾರವೇ ಪೆಟ್ರೋಲ್, ಡೀಸೆಲ್ ದರವನ್ನು ನಿರ್ಧಾರ ಮಾಡುತ್ತಿತ್ತು ಮತ್ತು ದರವನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿತ್ತು.
ಆ ನಂತರ ಸರ್ಕಾರವು ತೈಲ ಪರಿಷ್ಕರಣೆ ಜವಾಬ್ದಾರಿಯನ್ನು ತೈಲ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದು, ತೈಲ ಸಂಸ್ಥೆಗಳು ಜಾಗತಿಕ ತೈಲದರ, ವಿನಿಮಯ ದರ, ತೆರಿಗೆ, ಸಾರಿಗೆ ವೆಚ್ಚ ಎಲ್ಲವನ್ನು ಲೆಕ್ಕಹಾಕಿ ಇಂಧನ ದರವನ್ನು ನಿರ್ಧಾರ ಮಾಡುತ್ತದೆ.
petrol-diesel-crude-oil-price-reduction-fuel-price-cut-by-rs-14