ಭಾರತದಲ್ಲಿ ಸ್ಥಿರತೆ ಕಾಯ್ದಕೊಂಡಿರುವ ಇಂಧನ ಬೆಲೆ : ಇಳಿಕೆಯೂ ಇಲ್ಲ, ಏರಿಕೆಯೂ ಇಲ್ಲ..!
ನವದೆಹಲಿ : ಕೆಲ ದಿನಗಳು ಎಕ್ಸ್ ಪ್ರೆಸ್ ರೈಲಿನಂತೆ ಸ್ಪೀಡ್ ಆಗಿ ಪೆಟ್ರೋಲ್ ಡೀಸೆಲ್ ದರ ಪ್ರತಿನಿತ್ಯ ಏರಿಕೆಯಾಗ್ತಲೇ ಇತ್ತು. ಹಲವೆಡಡೆ ಶತಕ ಬಾರಿಸಿರುವ ಪೆಟ್ರೋಲ್ ಡೀಸೆಲ್ ದರ ಮತ್ತೆ ಎಲ್ಲಿ ಏರಿಕೆ ಆಗುತ್ತೆ ಅನ್ನೋ ಭಯ ಒಂದೆಡೆಯಾದ್ರೆ, ದರ ಕಮ್ಮಿ ಆಗುತ್ತಾ ಅನ್ನೋ ಆಸಾ ಭಾವನೆಯಲ್ಲಿದ್ದಾರೆ ವಾಹನಸವಾರರು.
ಆದ್ರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರತೆ ಕಾಯ್ದುಕೊಂಡಿದೆ. ಕಳೆದ 20 ದಿನಗಳಿಂದ ಇಂಧನ ದರದಲ್ಲಿ ಯಾವುದೇ ರೀತಿಯಾದ ಬದಲಾವಣೆಗಳು ಕಂಡು ಬಂದಿಲ್ಲ. ಹೆಚ್ಚಳವೂ ಆಗಿಲ್ಲ ಕಡಿಮೆಯೂ ಆಗಿಲ್ಲ. ಕಳೆದ ಫೆಬ್ರವರಿ.27ರಂದು ಪೆಟ್ರೋಲ್ ದರ 24 ಪೈಸೆ ಮತ್ತು ಡೀಸೆಲ್ ದರ 15 ಪೈಸೆ ಏರಿಕೆಯಾಗಿತ್ತು. ಅದಾದ ನಂತರ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.
ಭಾರತೀಯ ಶೇರುಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮತ್ತೆ ಕುಸಿತ : ಸೆನ್ಸೆಕ್ಸ್ 500 ಪಾಯಿಂಟ್ಸ್ ಇಳಿಕೆ
ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ದರ
ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ . 94.22, ಡೀಸೆಲ್ ದರ ರೂ. 86.37
ದೆಹಲಿಯಲ್ಲಿ ಪೆಟ್ರೋಲ್ ದರ ರೂ . 91.17, ಡೀಸೆಲ್ ದರ ರೂ. 81.47
ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ ರೂ . 91.35, ಡೀಸೆಲ್ ದರ ರೂ. 84.35
ಮುಂಬೈನಲ್ಲಿ ಪೆಟ್ರೋಲ್ ದರ ರೂ . 97.57, ಡೀಸೆಲ್ ದರ ರೂ. 88.60
ಚೆನ್ನೈನಲ್ಲಿ ಪೆಟ್ರೋಲ್ ದರ ರೂ . 93.11 , ಡೀಸೆಲ್ ದರ ರೂ. 86.45
ಸಚಿವ ಸುಧಾಕರ್ ಮನೆ ಮುಂದೆಯೇ ಹೊಡೆದಾಡಿಕೊಂಡ ಡ್ರೈವರ್ – ಗನ್ ಮ್ಯಾನ್..!
`ಒಂದು ಗಂಟೆಯ ಕಥೆ’ ಸಿನಿಮಾ ರಿಲೀಸ್..!