ವಾಹನ ಸವಾರರಿಗೆ ಸಿಹಿ ಸುದ್ದಿ
Petrol | ಪೆಟ್ರೋಲ್ ದರ ಪ್ರತಿ ಲೀಟರ್ ಗೆ 5 ರೂ ಇಳಿಕೆ
ಡೀಸೆಲ್ ದರ ಲೀಟರ್ ಗೆ 3 ರೂ ಇಳಿಕೆ
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ ಇಳಿಕೆ
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಘೋಷಣೆ
ಮುಂಬೈ : ಮಹಾರಾಷ್ಟ್ರದ ಜನತೆಗೆ ಸಿಎಂ ಏಕನಾಥ್ ಶಿಂಧೆ ಸಿಹಿ ಸುದ್ದಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಇಳಿಕೆ ಮಾಡುವ ಮೂಲಕ ಏಕನಾಥ್ ಶಿಂಧೆ ಜನರಿಗೆ ಕೊಡುಗೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಲೀಟರ್ ಗೆ ಐದು ರೂಪಾಯಿ ಮತ್ತು ಡೀಸೆಲ್ ಲೀಟರ್ ಗೆ ಮೂರು ರುಪಾಯಿ ಕಡಿಮೆ ಮಾಡಲಾಗಿದೆ.

ಇಂದು ಸಚಿವ ಸಂಪುಟ ಸಭೆ ನಡೆಯಿತು. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುತ್ತಿರುವುದಾಗಿ ತಿಳಿಸಿದರು.
ಇದೇ ವೇಳೆ ಉಪಸ್ಥಿತರಿದ್ದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರದ ಜನರಿಗೆ ಮತ್ತು ಮರಾಠಿ ಮನೂಗಳಿಗೆ ಇದೊಂದು ದೊಡ್ಡ ನೆಮ್ಮದಿ ಎಂದು ಸಿಎಂ ಶಿಂಧೆಯವರ ಘೋಷಣೆಯನ್ನ ಶ್ಲಾಘಿಸಿದ್ದಾರೆ.