Philippines Storm – ಫಿಲಿಪೈನ್ಸ್ ನಲ್ಲಿ ಭೀಕರ ಪ್ರವಾಹ – 98 ಮಂದಿ ಸಾವು
ಫಿಲಿಪೈನ್ಸ್ : ಧಾರಾಕಾರ ಮಳೆಯಿಂದಾಗಿ ಫಿಲಿಪೈನ್ಸ್ ನಲ್ಲಿ ಭೀಕರ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಇಲ್ಲಿಯವರೆಗೂ 98 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೇ ದೇಶಾದ್ಯಂತ ಸುಮಾರು 62 ಜನರು ನಾಪತ್ತೆಯಾಗಿದ್ದಾರೆ.
ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, 69 ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
![Philippines Storm: President Marcos to inspect damage as death toll nears 98](http://saakshatv.com/wp-content/uploads/2022/10/philippin.jpg)
ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಸಾವುಗಳು ಬ್ಯಾಂಗ್ಸಮೊರೊದಲ್ಲಿ ದಾಖಲಾಗಿದೆ.
ಈ ಪ್ರದೇಶದಲ್ಲಿ 53 ಸಾವುಗಳು ಸಂಭವಿಸಿದ್ದು, 22 ಜನರು ನಾಪತ್ತೆಯಾಗಿದ್ಧಾರೆ.
ಸಾವುಗಳ ಸಂಖ್ಯೆಯ ಬಗ್ಗೆ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.