ನವದೆಹಲಿ: ಕುಸ್ತಿ ಫೆಡರೇಶನ್ (WFI) ಅಧ್ಯಕ್ಷರಾಗಿ ಸಂಜಯ್ ಸಿಂಗ್ (Sanjay Singh) ಆಯ್ಕೆ ಮಾಡಿರುವುದನ್ನು ವಿರೋಧಿಸಿ ತಮ್ಮ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿ ಹಿಂದಿರುಗಿಸಲು ಕುಸ್ತಿಪಟು ವಿನೇಶ್ ಪೋಗಟ್ ನಿರ್ಧರಿಸಿದ್ದಾರೆ.
ನನ್ನ ಮೇಜರ್ ಧ್ಯಾನ್ ಚಂದ್ ಮತ್ತು ಖೇಲ್ ರತ್ನ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದೇನೆ. ನಮ್ಮನ್ನು ಈ ಪರಿಸ್ಥಿತಿಗೆ ತಂದಿದ್ದಕ್ಕೆ ‘ಪ್ರಭಾವಿ’ಗಳಿಗೆ ಧನ್ಯವಾದಗಳು, ”ಎಂದ ಪ್ರಧಾನಿ ಮೋದಿ ಅವರಿಗೆ ಬಹಿರಂಗವಾಗಿ ಪತ್ರ ಬರೆದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರ ಆಯ್ಕೆ ಪ್ರತಿಭಟಿಸಿ ಬಜರಂಗ್ ಪುನಿಯಾ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾಗಿರುವ ಪದ್ಮಶ್ರೀ ಹಿಂದಿರುಗಿಸಿದ್ದಾರೆ. ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಕ್ರೀಡೆಗೆ ವಿದಾಯ ಹೇಳಿದ ಕೆಲವು ದಿನಗಳ ನಂತರ ಫೋಗಟ್ ಅವರು ಕೂಡ ಘೋಷಿಸಿದ್ದಾರೆ.