ಶಿವಮೊಗ್ಗ : ಬೈಕ್ ಓಡಿಸುವಾಗ ಪ್ಯಾಂಡ್ ಜೇಬಿನಲ್ಲಿದ್ದ ಫೋನ್ ಬ್ಲಾಸ್ಟ್ ಆಗಿ, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೊರಬದಲ್ಲಿ ನಡೆದಿದೆ.
22 ವರ್ಷದ ಶರತ್ ಗಾಯಗೊಂಡ ಯುವಕನಾಗಿದ್ದು, ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮದ ಕೆರೆ ಬಳಿ ಘಟನೆ ನಡೆದಿದೆ.
ಫೋನ್ ಬ್ಲಾಸ್ಟ್ ಆಗುತ್ತಿದ್ದಂತೆ ಬೈಕ್ ನಲ್ಲಿದ್ದ ಯುವಕರು ಗಾಬರಿಯಲ್ಲಿ ಕೆರೆಗೆ ಬಿದ್ದಿದ್ದಾರೆ.
ಈ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಶರತ್ ನನ್ನು ಹಿಂದೆ ಕುಳಿತುಕೊಂಡಿದ್ದವ ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೊಬೈಲ್ ಬ್ಲಾಸ್ಟ್ ನಿಂದಾಗಿ ಶರತ್ ನ ಬಲ ತೊಡೆಗೆ ಗಂಭೀರವಾದ ಗಾಯವಾಗಿದೆ.
ಸದ್ಯ ಆತನಿಗೆ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.