ಕೊರೊನಾ ಲಾಕ್ ಡೌನ್ ಹಿನ್ನಲೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವಿಚಿತ್ರ ಚಾಲೆಂಜ್ ಗಳು ಭಾರಿ ವೈರಲ್ ಆಗುತ್ತಿವೆ. ಇತ್ತೀಚೆಗೆ ಪಿಲ್ಲೋ ಚಾಲೆಂಜ್, ಡಲಗೋನಾ ಕಾಫಿ ಚಾಲೆಂಜ್, ಶಾಪಿಂಗ್ ಚಾಲೆಂಜ್ ಗಳು ವೈರಲ್ ಆಗಿತ್ತು. ಸಾಕಷ್ಟು ಜನರು ಈ ಚಾಲೆಂಜ್ ಗಳನ್ನು ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಚಾಲೆಂಜ್ ಗಳ ಮೊರೆ ಹೋಗಿರುವ ಸಂಗತಿಗಳು ಬಹಳಷ್ಟಿದೆ. ಇಂತಹ ಚಾಲೆಂಜ್ ಗಳ ಮಧ್ಯೆ ಇದೀಗ ಮತ್ತೊಂದು ಹೊಸ ಚಾಲೆಂಜ್ ಹುಟ್ಟಿಕೊಂಡಿದೆ. ಅದುವೆ ‘ಪೀ ಯುವರ್ ಪ್ಯಾಂಟ್ಸ್ ಚಾಲೆಂಜ್’!
ಹೌದು, ಈ ಚಾಲೆಂಜ್ ಕೇಳಲು ಹಾಸ್ಯಸ್ಪದ ಎನಿಸಿದರು ಸಾಕಷ್ಟು ಜನರು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಪೀ ಯುವರ್ ಪ್ಯಾಂಟ್ಸ್ ಚಾಲೆಂಜ್ ಎಂದರೇ.. ಪ್ಯಾಂಟ್ ನಲ್ಲಿ ಮೂತ್ರ ವಿಸರ್ಜನೆ ಮಾಡುವುದೇ ಈ ಚಾಲೆಂಜ್ ಗುಟ್ಟು. ವಿಡಿಯೋ ಮಾಡುತ್ತಾ ಈ ಚಾಲೆಂಜ್ ಅನ್ನು ಮಾಡಬೇಕು. ಈಗಾಗಲೇ ಅನೇಕರು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಸದ್ಯ ವಿದೇಶದಲ್ಲಿ ಪೀ ಯುವರ್ ಪ್ಯಾಂಟ್ಸ್ ಚಾಲೆಂಜ್ ಸದ್ದು ಮಾಡುತ್ತಿದೆ.
ಈ ಚಾಲೆಂಜ್ ಸದ್ಯ ಟಿಕ್ ಟಾಕ್ ನಲ್ಲಿ ವೈರಲ್ ಆಗುತ್ತಿದೆ. ಲಿಯಾಮ್ ವೀಯರ್ ಎಂಬಾತ ಈ ಚಾಲೆಂಜ್ ಅನ್ನು ಸ್ವೀಕರಿಸಿ ನಂತರ ಟಿಕ್ ಟಾಕ್ ನಲ್ಲಿ ಹರಿ ಬಿಟ್ಟಿದ್ದಾರೆ. ಲಿಯಾಮ್ ಅಮೆರಿಕದ ಕಾನ್ ಸಾಸ್ ನವರಾಗಿದ್ದು, ಸಿನಿಮಾ ನಿರ್ಮಾಣ ಮತ್ತು ಹಾಸ್ಯನಟನಾಗಿದ್ದಾರೆ. ಸಾಕಷ್ಟು ಚಾಲೆಂಜ್ ಗಳು ವಿದೇಶಿಗರಿಂದ ಹುಟ್ಟಿಕೊಂಡರೂ ಆನಂತರ ಭಾರತೀಯರು ಕೂಡ ಈ ಚಾಲೆಂಜ್ ಸ್ವೀಕರಿಸುತ್ತಾರೆ. ಈಗ ಪೀ ಯುವರ್ ಪ್ಯಾಂಟ್ಸ್ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಟ್ಟೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ಚಾಲೆಂಜ್ ಎಷ್ಟು ಜನರು ಸ್ವೀಕರಿಸಿ ನಗೆಪಾಟಲಿಗೀಡಾಗುತ್ತಾರೆ ಎಂದು ಕಾದುನೋಡಬೇಕಿದೆ.








